ಪರಿಸರ ರಕ್ಷಣೆಗೆ ಮುಂದಾಗಲಿ

13Rayabag1
Published on

ರಾಯಬಾಗ: ಪ್ರತಿಯೊಬ್ಬರೂ ಐದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ತಾಲೂಕಿನ ಬೂದಿಹಾಳ ಗ್ರಾಮದ ತಾರಾಬಾಯಿ ದೇವಸ್ಥಾನ ಆವರಣದಲ್ಲಿ ಬಿಜೆಪಿ ರಾಯಬಾಗ ಮಂಡಲ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಕಾರ್ಯಕಾರಣಿ ಸಭೆ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ನಾಶದಿಂದ ಪ್ರಕೃತಿಯಲ್ಲಿ ಏರುಪೇರು ಆಗಿ ದೇಶದಲ್ಲಿ ವಿವಿಧೆಡೆ ವಿಕೋಪ ಉಂಟಾಗುತ್ತಿದೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಮಾತನಾಡಿ, ಪ್ರಕೃತಿಗೆ ಪರ್ಯಾಯ ಯಾವುದು ಇಲ್ಲದೇ ಇರುವುದರಿಂದ ನಾವೆಲ್ಲರೂ ನಿಸರ್ಗ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಬಿಜೆಪಿ ಮುಖಂಡರಾದ ಮಹೇಶ ಭಾತೆ, ದುಂಡಪ್ಪ ಭೆಂಡವಾಡೆ, ರಾಜಶೇಖರ ಖನದಾಳೆ, ಮಹಾದೇವ ಬೋರಗಾಂವೆ, ವಿ.ಎಸ್.ಪೂಜಾರಿ, ರಾಜು ಹರಗನ್ನವರ, ಸದಾಶಿವ ಹಳಿಂಗಳಿ, ಅಪ್ಪಾಸಾಹೇಬ ಬ್ಯಾಕೂಡೆ, ನಿಂಗಪ್ಪ ಪಕಾಂಡಿ, ಶ್ರೀಧರ ಮೂಡಲಗಿ, ಬಸವರಾಜ ಡೊನವಾಡೆ, ಭಾರತಿ ಲೋಹಾರ, ಪಿ.ಎ.ನಾಯಿಕ, ಸಂಜು ಮೈಶಾಳೆ, ಅಜಿತ್ ಮಾಂಗ, ವೀರೇಂದ್ರ ಬ್ಯಾಕೂಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net