

ಬೀದರ್: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿಗಾಗಿ ಇಲ್ಲಿಯ ರೋಜ್ ಮೆಮೊರಿಯಲ್ ಸ್ಕೂಲ್ ವಿದ್ಯಾರ್ಥಿಗಳು ಜಾಥಾ ನಡೆಸಿದರು.
ಮಂಗಲಪೇಟೆಯಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಬರಹಗಳ ಫಲಕಗಳನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗುತ್ತ ಜಾಥಾ ನಡೆಸಿದರು.
ಪ್ರಕೃತಿ ಮಾನವನಿಗೆ ಎಲ್ಲವನ್ನೂ ಕೊಟ್ಟಿದೆ. ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಜಾಥಾಕ್ಕೆ ಚಾಲನೆ ನೀಡಿದ ಪ್ರಸಾದ್ ಎಜುಕೆಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಫಿಲೋಮನ್‍ರಾಜ್ ಪ್ರಸಾದ್ ಹೇಳಿದರು.
ಶುದ್ಧ ಗಾಳಿ, ಸಕಾಲಕ್ಕೆ ಮಳೆಗಾಗಿ ತಲಾ ಒಂದು ಸಸಿ ನೆಡಬೇಕು ಎಂದು ನುಡಿದರು.
ಟ್ರಸ್ಟ್ ನಿರ್ದೇಶಕಿ ಸುರೇಖಾ ಫಿಲೋಮನ್‍ರಾಜ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.