

ಗೋಣಿಕೊಪ್ಪ: ರೋಟರಿ ಸಂಸ್ಥೆ ಪರಿಸರ, ಜಲ ಸಂರಕ್ಷಣೆ, ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಪ್ರಕಾಶ್ ಕಾರಂತ್ ಹೇಳಿದರು.
ರೋಟರಿ ಕಚೇರಿಯಲ್ಲಿ ಆಯೋಜಿಸಿದ್ದ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷೆ ಜೆನೊಫರ್ ಜಾನ್ ಮಹಿಳಾ ಚಿಂತನೆಯಂತೆ ವನಸಿರಿ, ಜಲಸಿರಿ, ಆರೋಗ್ಯ ಸಿರಿ, ವಿದ್ಯಾ ಸಿರಿ ಕಾರ್ಯಕ್ರಮಗಳ ಮೂಲಕ ಸಮಾಜದ ಎಲ್ಲ ವರ್ಗಕ್ಕೂ ಯೋಜನೆ ತಪುಪಿಸುವ ಜವಾಬ್ದಾರಿ ನಿಭಾಯಿಸುತ್ತಿದೆ. ನಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ 88 ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಂದೇ ಒಂದು ಚೌಕಟ್ಟಿನಲ್ಲಿ ಮಾನವೀಯ ಮೌಲ್ಯಕ್ಕೆ ಬೆಲೆ ನೀಡುತ್ತಿದೆ. ಪರಿಸರ ಕಾಳಜಿ ಮೂಡಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪೊಲಿಯೋ ನಿರ್ಮೂಲನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಕೈಜೋಡಿಸಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಮಾತ್ರ ಪೊಲಿಯೋ ನಿರ್ಮೂಲನೆ ಆಗಬೇಕಿದೆ. ಈ ದೇಶಗಳು ಕೂಡ ಲಸಿಕೆ ನೀಡುವಲ್ಲಿ ಉತ್ತಮ ಸ್ಪಂದನೆ ನೀಡುತ್ತಿದ್ದು, ವಿಶ್ವದಲ್ಲಿ ಪೊಲಿಯೋ ನಿರ್ಮೂನೆಯಲ್ಲಿ ಮಹತ್ವದ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಆಡಳಿತ ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ, ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ಜೆ.ಕೆ.ಶುಭಾಷಿಣಿ, ಸಹಾಯಕ ಪ್ರಾಂತಪಾಲ ರತನ್ ತಮ್ಮಯ್ಯ, ವಲಯ ಸೇನಾನಿ ನೆವಿನ್ ಬೆಳ್ಯಪ್ಪ, ಕಾರ್ಯದರ್ಶಿ ಅರುಣ್ ತಮ್ಮಯ್ಯ ಇದ್ದರು.