ಪರಿಸರ ಕಾಪಾಡುವುದು ಎಲ್ಲರ ಹೊಣೆ:ಡಿ.ಕೆ.ಮಂಜಯ್ಯ

ಪರಿಸರ ಕಾಪಾಡುವುದು ಎಲ್ಲರ ಹೊಣೆ:ಡಿ.ಕೆ.ಮಂಜಯ್ಯ
Published on

ಹಾಸನ: ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಪರಿಸರ ಸಮತೋಲನದಿಂದ ಜೀವ ಸಂಕುಲ ಉಳಿಯಲು ಸಾಧ್ಯ ಎಂದು ಗಂಧದಕೋಠಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಿ.ಕೆ.ಮಂಜಯ್ಯ ತಿಳಿಸಿದರು.
ರೋಟರಿ ಕ್ಲಬ್ ಹಾಸನ ಮತ್ತು ಮಹಿಳಾ ಕಾಲೇಜು ಸಹಯೋಗದೊಂದಿಗೆ ಶನಿವಾರ ಕಾಲೇಜು ಸುತ್ತ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕ ಕರ್ತವ್ಯ. ಒಂದೊಂದು ಗಿಡ ನೆಡುವ ಮೂಲಕ ರೋಗ ಮುಕ್ತ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ರೋಟರಿ ಕ್ಲಬ್ ಹಾಸನದ ಅಧ್ಯಕ್ಷ ಕೆ.ಜೆ.ಶ್ರೀನಾಥ್ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ, ಒಳಚರಂಡಿ ಸ್ವಚ್ಛತೆ, ಹಸಿಕಸ ಹಾಗೂ ಒಣಕಸ ವಿಂಗಡನೆ, ಹೀಗೆ ಪರಿಸರವನ್ನು ಮಾಲಿನ್ಯವಾಗದಂತೆ ಕಾಪಾಡಬೇಕು. ಅತಿಯಾದ ಅಶುಚಿತ್ವ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಪ್ಲಾಸ್ಟಿಕ್‌ಗೆ ಬದಲಾಗಿ ಬಟ್ಟೆ ಬ್ಯಾಗ್‌ಗಳ ಬಳಕೆಯಿಂದ ಪರಿಸರ ಹಾನಿಯಿಂದ ಮುಕ್ತವಾಗಬಹುದು ಎಂದರು.
ರೋಟರಿಯನ್‌ಗಳಾದ ಗಿರೀಶ್‌ಕುಮಾರ್, ಜೆ.ಎಂ.ಮಂಜುನಾಥ , ಚಂದ್ರಶೇಖರ್, ಪತ್ರಕರ್ತ ಗೋಪಾಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ದಿಲೀಪ್, ಉಪನ್ಯಾಸಕ ಎಚ್.ಕೆ. ದಿಲೀಪ್‌ಕುಮಾರ್,ಕೆ.ಸಿ. ನವೀನ್, ಡಾ. ದಯಾನಂದ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net