

ಚಿಕ್ಕಮಗಳೂರು: ಹಸಿರು ಫೌಂಡೇಶನ್ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದೆ. ಪರಿಸರ ಉಳಿವಿಗಾಗಿ ನಾವೆಲ್ಲ ಪಣ ತೊಡಬೇಕು. ವಿದ್ಯಾರ್ಥಿಗಳು ಈಗಿನಿಂದಲೇ ದೃಡ ಸಂಕಲ್ಪ ಮಾಡಬೇಕಿದೆ ಎಂದು ಐಡಿಎಸ್‌ಜಿ ಕಾಲೇಜು ಪ್ರಾಚಾರ್ಯೆ ಪುಷ್ಪಾಭಾರತಿ ತಿಳಿಸಿದರು.
ನಗರದ ಐಡಿಎಸ್‌ಜಿ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ಹಸಿರು ಫೌಂಡೇಶನ್‌ನಿAದ ಆಯೋಜಿಸಲಾಗಿದ್ದ ಪರಿಸರ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪರಿಸರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಮಾತನಾಡಿ, ಎಲ್ಲ ವರ್ಗದ ಕಾಡು, ವನ್ಯಜೀವಿಗಳು ಒಂದುಕ್ಕೊAದು ಪೂರಕವಾಗಿ ಬದುಕುತ್ತವೆ. ನಿರ್ಧಿಷ್ಟ ಪ್ರದೇಶದಲ್ಲಿ ನಿರ್ಧಿಷ್ಟ ಜಾತಿಯ ಸಸ್ಯಗಳು ಮಾತ್ರ ಬೆಳೆಯಲು ಸಾಧ್ಯವಿಲ್ಲ. ಭೌಗೋಳಿಕವಾಗಿ ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ಬೆಳೆಸಿದಾಗ ಉತ್ತಮ ಪರಿಸರ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ಹಸಿರು ಫೌಂಡೇಷನ್ ಹುಟ್ಟು ಹಾಕಿದ್ದು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಬೇಕು ಎಂಬ ಕಾರಣದಿಂದ. ನಾವುಗಳು ಪ್ರಕೃತಿಯ ಪರವಾಗಿ ಕೆಲಸ ಮಾಡಬೇಕು. ಆಗ ಜಾಗತಿಕ ತಾಪಮಾನ ಏರಿಕೆ ತಡೆಯಲು, ಅಂತರ್ಜಾಲ ಮಟ್ಟ ಕಾಯ್ದು ಕೊಳ್ಳುವಿಕೆ ಸಾಧ್ಯವಾಗಲಿದೆ. ಇವೆಲ್ಲವೂ ಕೂಡ ಕಾಡನ್ನು ರಕ್ಷಿಸುವುದರ ಮೂಲಕ ಮಾತ್ರ ಸಾಧ್ಯ. ಹೀಗಾಗಿ ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಫೌಂಡೇಶನ್ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಫೌಂಡೇಷನ್ ಉಪಾಧ್ಯಕ್ಷ ವಿನು ಪ್ರಸಾದ್, ಕಾರ್ಯದರ್ಶಿ ಅಭಿಜಿತ್ , ಖಜಾಂಚಿ ಸುನಿಲ್ ಊರುಬಗೆ, ನಿರ್ದೇಶಕರಾದ ಜಯಂತ್ ಹೊಸಕೆರೆ, ಶೋಧನ್ ಹೊಸಕೆರೆ, ರೋಹನ್ ಹಂಡುಗುಲಿ ಮತ್ತಿತರರಿದ್ದರು.