ಪರಿಸರ ಅಸಮತೋಲನದಿಂದ ಅಧಿಕ ತಾಪಮಾನ

High temperature due to environmental imbalance
High temperature due to environmental imbalance
Published on

ಗುಳೇದಗುಡ್ಡ: ಪರಿಸರ ಅಸಮತೋಲನದಿಂದ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗಿದೆ. ವಾತಾವರಣದಲ್ಲಿ ವೈಪರೀತ್ಯ ಉಂಟಾಗಿ ಸರಿಯಾಗಿ ಮಳೆಯಾಗುತ್ತಿಲ್ಲ. ಪರಿಸರ ಸಮತೋಲನ ಕಾಪಾಡಲು ಸಮುದಾಯದ ಸಹಭಾಗಿತ್ವ ತುಂಬಾ ಅಗತ್ಯವಾಗಿದೆ ಎಂದು ವಿಜ್ಞಾನ ಶಿಕ್ಷಕಿ ಕೀರ್ತಿ ಬಡಿಗೇರ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಗುರುವಾರ ಚಿಕ್ಕಮುಚ್ಚಳಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಇಕೋ ಕ್ಲಬ್, ಭಾರರ್ ಸೈಟ್ಸ್ ಹಾಗೂ ಗೈಡ್ಸ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಚಾರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಶಾಲೆಗಳಲ್ಲಿ ಗಿಡಗಳನ್ನು ಬೆಳೆಯಿಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಸದಸ್ಯ ಬಸವರಾಜ ಅಂಗಡಿ, ಪ್ರಭಾರಿ ಪ್ರಾಚಾರ್ಯ ಶಂಕರರಾವ್ ಕುಲಕರ್ಣಿ, ಶಿಕ್ಷಕರಾದ ರಮೇಶ ಕತ್ತಿಕೈ, ಬಸವರಾಜ ಸಿಂದಗಿಮಠ, ಹನುಮಂತ ಬಂಡಿಗಣಿ, ಶ್ರೀನಿವಾಸ ಈಳಗೇರ, ಬಸವರಾಜ ಚಿಕ್ಕನ್ನವರ, ರಮೇಶ ಹಂಜಿ, ಎಸ್.ಎಸ್. ರಾಠೋಡ, ಎಸ್.ಬಿ. ಮುದೇನಗುಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net