ಪರಿಸದೆಡೆ ಇರಲಿ ನಿತ್ಯವೂ ಕಾಳಜಿ

CTD VIDYA VIKASA------
Published on

ಚಿತ್ರದುರ್ಗ: ಪರಿಸರದೆಡೆಯ ಕಾಳಜಿ ಪ್ರತಿ ದಿನವೂ ಇರಬೇಕೆಂದು ವಿದ್ಯಾವಿಕಾಸ ವಿದ್ಯಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ ಹೇಳಿದರು.

ಸಂಸ್ಥೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪರಿಸರ ದಿನದಂದು ಅದರ ರಕ್ಷಣೆ, ಮಹತ್ವದ ಬಗ್ಗೆ ಮಾತು ಸೀಮಿತವಾಗದೆ ನಿತ್ಯವೂ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಬಟ್ಟೆಯ ಕೈ ಚೀಲಗಳನ್ನು ಬಳಸುವುದು ಅತ್ಯುತ್ತಮ ಎಂದರು.

ಮನೆಗಳಲ್ಲಿ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವನ್ನಾಗಿ ವಿಂಗಡಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿಗೆ ನೆರವಾಗಬೇಕು ಎಂದರು.

ಮುಖ್ಯಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ, ಪ್ರಾಂಶುಪಾಲ ಬಸವರಾಜಯ್ಯ ಇದ್ದರು.

ಶಿಫಾ ಸ್ವಾಗತಿಸಿ, ಲೇಖನಾ ವಂದಿಸಿದರು. ಆಯೇಷಾ ಪ್ರತಿಜ್ಞಾವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net