ಪರಿಶ್ರಮಪಟ್ಟರೆ ಸಾಧನೆ ಸಾಧ್ಯ

22
Published on

ಮೈಸೂರು: ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಲ್ಲಿ ಹಿಂಜರಿಕೆ ಬೇಡ. ಚಂದ್ರಯಾನ-3ರ ಯಶಸ್ಸಿನಲ್ಲಿ ಗ್ರಾಮೀಣ ಭಾಗದಲ್ಲಿ ಕಲಿತ ಅನೇಕ ವಿಜ್ಞಾನಿಗಳ ಪಾತ್ರವಿದೆ. ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ಪ್ರತಿಫಲ ಸಿಗುತ್ತದೆ ಎಂದು ಶ್ರೀ ದುರ್ಗಾ ಶಕ್ತಿ ಮಹಿಳಾ ಸ್ವಸಾಯ ಸಂಘದ ಅಧ್ಯಕ್ಷ ನಂದ ಗಜೇಂದ್ರ ಹೇಳಿದರು.


ಶಿಕ್ಷಕರ ದಿನಾಚರಣೆ ಅಂಗವಾಗಿ ಶ್ರೀ ದುರ್ಗಾ ಶಕ್ತಿ ಮಹಿಳಾ ಸ್ವಸಾಯ ಸಂಘದ ವತಿಯಿಂದ ಮಂಡಿಮೊಹಲ್ಲಾದ ಎಂ.ಪಿ.ಉಗ್ರಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್, ಮ್ಯಾಟ್, ಪುಸ್ತಕ, ಲೇಖನಿಗಳು, ತಟ್ಟೆಲೋಟ, ನೀರಿನ ಬಾಟಲಿ, ಸಿಹಿ ವಿತರಿಸಿ ಮಾತನಾಡಿದರು.


ಸಾಧನೆ ಸಾಧಕನ ಸ್ವತ್ತು. ಸಾಧನೆ ಹಿಂದೆ ಅಪಾರ ಶ್ರಮವಿದೆ. ವಿದ್ಯಾರ್ಥಿಗಳು ಉದಾಸೀನ ತೋರದೆ ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಜೀವದಾನ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಕಲಿಕೆ ಕೇವಲ ಅಂಕ ಗಳಿಕೆ ಆಗಿರದೆ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣ ಆಗಬೇಕು. ಮಕ್ಕಳಲ್ಲಿ ತಾಳ್ಮೆ ಬೆಳೆಸಿ ಗುರು-ಹಿರಿಯರನ್ನು ಗೌರವಿಸುವ ಶಿಕ್ಷಣದ ಅಗತ್ಯವಿದೆ ಎಂದರು.


ಪಾಲಿಕೆಯ ಮಾಜಿ ಸದಸ್ಯರಾದ ಎಂ.ಡಿ.ಪಾರ್ಥಸಾರಥಿ, ಸದಾಶಿವ, ಮುಖ್ಯ ಶಿಕ್ಷಕ ಎಚ್.ಎಸ್. ಸುರೇಂದ್ರ, ಸಹಶಿಕ್ಷಕ ಪುರುಷೋತ್ತಮ್, ಮೀನಾಕ್ಷಿ, ಜಗದೀಶ್, ಸಂಘದ ಉಪಾಧ್ಯಕ್ಷೆ ನಾಗರತ್ನ, ಪದಾಧಿಕಾರಿಗಳಾದ ಪೂರ್ಣಿಮಾ, ಮಂಜುಳಾ, ಸುರೇಖಾ, ಕಲಾವತಿ , ಕೃಷ್ಣವೇಣಿ, ಪಾರ್ವತಿ, ಮಾಲತಿ, ಕುಸುಮ, ಸುಂದರಮ್ಮ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net