ಪರಿಶ್ರಮದಿಂದಲೇ ಯಶಸ್ವಿ ಜೀವನ

Capture
Published on

ಭಾಲ್ಕಿ: ವಿದ್ಯಾಥರ್ಿಗಳು ಜೀವನ ಪರಿಶುದ್ಧವಾಗಿಟ್ಟುಕೊಂಡು ಜೀವನದ ಮೌಲ್ಯಗಳು ಅಳವಡಿಸಿಕೊಳ್ಳಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಸಂಗಮೇಶ್ವರ ಪ್ರೌಢಶಾಲಾ ಆವಣರದಲ್ಲಿಯ ಜಿ.ಎಚ್.ಶಿವಮಠ ನಿಡಗುಂದಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೊಸ ವಿದ್ಯಾಥರ್ಿಗಳ ಸ್ವಾಗತ ಮತ್ತು ಹಳೆಯ ವಿದ್ಯಾಥರ್ಿಗಳ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ನಾವು ಮಾಡುವ ಕೆಲಸ ಶ್ರದ್ಧೆ, ನಿಷ್ಠೆಯಿಂದ ಮಾಡಬೇಕು. ವಿದ್ಯಾಥರ್ಿಗಳ ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡದು ಪ್ರಯತ್ನವಾಗಿದೆ. ಪರಿಶ್ರಮದಿಂದಲೇ ಯಶಸ್ವಿ ಜೀವನ ಸಾಧ್ಯ. ಕೆಟ್ಟ ಚಟಕ್ಕೆ ಅಂಟಿಕೊಳ್ಳದೇ ಒಳ್ಳೆಯವರ ಸಂಗದಲ್ಲಿ ಜೀವನ ಸಾಗಿಸಬೇಕೆಂದು ಹೇಳಿದರು.

ವಿದ್ಯಾಥರ್ಿಗಳಿಗೆ ಜೀವನದಲ್ಲಿ ಯಾವುದೇ ದುಶ್ಚಟಗಳು ಹತ್ತಿರ ಬರದಂತೆ ನೋಡಿಕೊಳ್ಳುತ್ತೇವೆ ಎನ್ನುವ ಪ್ರತಿಜ್ಷೆ ಮಾಡಿಸಿದರು. ಹಿರೇಮಠ ಸಂಸ್ಥಾನದ ಆಡಳಿತಾಧಿಕಾರಿ ಮೋಹನ ರೆಡ್ಡಿ , ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿದರು. ಐಟಿಐ ಕಾಲೇಜಿನ ಪ್ರಾಂಶುಪಾಲ ದೇವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ವಿಶ್ವನಾಥ ಪಕ್ಕಾ, ಹಿರಿಯ ಶಿಕ್ಷಕ ಶೇಶವಾರ ಬಿರಾದಾರ, ಬಸವರಾಜ ಗೊರನಾಳೆ, ರಾಜಕುಮಾರ ಕಲಶೆಟ್ಟಿ ಇತರರಿದ್ದರು. ಸುರೇಶ ಪುರಂತ ಸ್ವಾಗತಿಸಿದರು. ರಾಜಕುಮಾರ ಸ್ವಾಮಿ ನಿರೂಪಣೆ ಮಾಡಿದರು. ಬಬ್ರುವಾನ ಭೂರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net