ಪರಿಶ್ರಮದಿಂದ ಉನ್ನತಿ ಸಾಧ್ಯ

2202Klb13
Published on

ಕಲಬುರಗಿ: ಜೀವನದಲ್ಲಿ ಪರಿಶ್ರಮ ಪಟ್ಟರೆ ಉನ್ನತ ಸಾಧನೆ ಮಾಡಲು ಸಾಧ್ಯವಿದ್ದು, ವಿದ್ಯಾರ್ಥಿ ಕಲಿಕಾ ಹಂತದಲ್ಲೇ ಶಿಸ್ತು, ಆತ್ಮವಿಶ್ವಾಸ, ಅಧ್ಯಯನ ಶೀಲತೆ ಮೈಗೂಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಸಲಹೆ ನೀಡಿದರು.

ಬ್ರಹ್ಮಪುರ ಬಡಾವಣೆಯ ಅಖಿಲ ಕರ್ನಾಟಕ ಸ್ನೇಹ ಗಂಗಾವಾಹಿನಿಯ ಶಾಲಾ ಕಾಲೇಜುಗಳ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಬೇಕು ಎಂದರು.

ವಾರ್ತಾ ಮತ್ತು ಪ್ರಚಾರ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಅಪ್ಪಾರಾವ ಅಕ್ಕೋಣಿ ಮಾತನಾಡಿ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ನೈತಿಕ ಮೌಲ್ಯಗಳು ಬೆಳೆಯಬೇಕು ಎಂದರು.

ಅರ್ಥಶಾಸ್ತಜ್ಞ ಡಾ.ವಾಸುದೇವ ಸೇಡಂ, ಕಲ್ಯಾಣ ಕರ್ನಾಟಕ ಶೈP್ಷÀಣಿಕ ಸುಧಾರಣಾ ಸಮಿತಿ ಸದಸ್ಯೆ ಡಾ.ನಾಗಾಬಾಯಿ ಬುಳ್ಳಾ ಮಾತನಾಡಿದರು. ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್, ಕಾರ್ಯಾಧ್ಯP್ಷÀ ಸಾಬಣ್ಣ ವಡಗೇರಿ, ಉಪಾಧ್ಯP್ಷÀ ರಾಮಲಿಂಗ ನಾಟೀಕಾರ, ಪ್ರಮುಖರಾದ ಹರ್ಷದ್, ವಿಜಯಲಕ್ಷಿö್ಮÃ ಬೆಳಮಗಿ, ಸೋನಾಲಿ ಬೆಟಗೇರಿ ಇತರರಿದ್ದರು. ರೇಣುಕಾ ಕೊತಲಿ, ಭಾಗ್ಯಶ್ರೀ ಪಾಟೀಲ್ ನಿರೂಪಣೆ ಮಾಡಿದರು. ಶಿವಾನಂದ ಕೇರೂರ ಪ್ರಾರ್ಥಿಸಿದರು. ಶೃತಿ ಹೂಗಾರ ಸ್ವಾಗತಿಸಿದರು. ಆರತಿ ವಡಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net