ಪರಿಶಿಷ್ಟರ ಹಿತ ಕಾಪಾಡಿ

Manavi
Published on

ಚಿತ್ರದುರ್ಗ: ಎಸ್‌ಸಿಎಸ್‌ಟಿ ಮತ್ತು ಟಿಎಸ್‌ಪಿ ಕಾಯ್ದೆ ಕಲಂ-7 (ಡಿ) ರಾಜ್ಯ ಸರ್ಕಾರ ರದ್ದುಗೊಳಿಸಲು ಸರ್ಕಾರಿ ಆದೇಶ ಹೊರಡಿಸಬೇಕು. ಇದರಡಿ ದಶಕದಲ್ಲಿ ಅಂದಾಜು 70 ಸಾವಿರ ಕೋಟಿ ರೂ. ದುರ್ಬಳಕೆಯಾಗಿದ್ದು, ಅನುದಾನವನ್ನು ಪರಿಶಿಷ್ಟರಿಗೆ ಮಂಜೂರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ) ಕಾರ್ಯಕರ್ತರು ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಮೂಲಕ ಮನವಿ ರವಾನಿಸಿದರು.

ಸಮಿತಿ ಪದಾಧಿಕಾರಿಗಳಾದ ಮಂಜುನಾಥ ಹೆಗ್ಗೆರೆ, ಕೆ.ಟಿ.ಮುತ್ತುರಾಜ್, ಮಂಜುನಾಥ್, ಎಂ.ಡಿ.ಆಸೀಫ್, ಡಿ.ಎನ್.ಬಿ.ಮಾರಪ್ಪ, ಗೋವಿಂದಪ್ಪ, ಎಚ್.ಎಸ್.ಮಾರುತೇಶ್, ಭರಮಗಿರಿ ಕಣುಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net