ಪರಿಶಿಷ್ಟರ ಸಮಸ್ಯೆಗೆ ಸ್ಪಂದಿಸಿ

22KAGWAD1
Published on

ಕಾಗವಾಡ: ತಾಲೂಕಿನ ಎಸ್ಸಿ, ಎಸ್ಟಿ ಸಮುದಾಯದ ಜನರ ಸಮಸ್ಯೆಗಳು ಬಹಳಷ್ಟಿವೆ. ಅಧಿಕಾರಿಗಳು ಸ್ಪಂದನೆ ಮಾಡಬೇಕೆಂದು ದಲಿತ ಮುಖಂಡರು ಒತ್ತಾಯಿಸಿದರು.

ಪಟ್ಟಣದ ಬಸವ ನಗರದ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಎಸ್ಸಿ, ಎಸ್ಟಿ ಸಮುದಯದ ಕುಂದುಕೊರತೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜುಗೂಳ ಗ್ರಾಮದಲ್ಲಿರುವ ಎಸ್ಸಿ ಸಮುದಾಯದ ಸ್ಮಶಾನ ಭೂಮಿ ವಿವಾದ ಸಂಬಂಧಿಸಿದಂತೆ  ಹೋರಾಟ ಮಾಡಿ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಜೋರಾಗಿರುವ ಕುರಿತು ಚರ್ಚೆ ನಡೆಯಿತು. ತಳವಾರ ಸಮುದಾಯಕ್ಕೆ ಸಿಕ್ಕಿರುವ ಎಸ್ಟಿ ಕೆಟಗರಿಯಿಂದ ಹಕ್ಕು ಚ್ಯುತಿ ಉಂಟಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸೂಚಿಸಿದರು. ಸರ್ಕಾರದ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ರಾಜೇಶ ಬುರ್ಲಿ ಭರವಸೆ ನೀಡಿದರು.

ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವ ಕುರಿತು ನಿರ್ಣಯಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ, ಡಿಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ತಾಪಂ ಇಒ ವೀರಣ್ಣ ವಾಲಿ, ಬಿಇಒ ಎಂ.ಆರ್. ಮುಂಜೆ, ಉಪತಹಸೀಲ್ದಾರ್ ರಷ್ಮಿ ಜಕಾತಿ, ಟಿಎಚ್‌ಒ ಡಾ. ಬಸಗೌಡ ಕಾಗೆ, ಅಣ್ಣಾಸಾಹೇಬ ಕೋರೆ, ಅಬಕಾರಿ ಇಲಾಖೆಯ ಮಹಾಂತೇಶ ಬಂಡಗಾರ, ಜ್ಞಾನೇಶ್ವರ ಕಾಂಬಳೆ, ಮಲ್ಲಿಕಾರ್ಜುನ ನಾಮದಾರ, ದುರ್ಯೋಧನ ಮಾಳಿ, ರಾಕೇಶ ಅರ್ಜುನವಾಡ, ಸಂಗಮೇಶ ಬಾಗೇವಾಡಿ, ಕೃಷಿ ಇಲಾಖೆಯ ಕಾಂತಿನಾಥ ಬಿರಾದರ, ಕೆ.ಕೆ. ಗಾವಡೆ, ಸುಜಾತಾ ಪಾಟೀಲ, ಸಂಜಯ ತಳವಳಕರ, ವಿವೇಕ ಕರಪೆ, ವಿದ್ಯಾಧರ ಧೊಂಡಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net