ಪರಿಶಿಷ್ಟ ಜಾತಿ ಒಳ ಮೀಸಲು ಸಮೀಕ್ಷೆ ಅವಧಿ ಮರು ವಿಸ್ತರಣೆ

ctd DC venktesh-----
Published on

ಚಿತ್ರದುರ್ಗ: ಪರಿಶಿಷ್ಟ ಜಾತಿ ಒಳ ಮೀಸಲು ವರ್ಗೀಕರಣ ಹಿನ್ನೆಲೆಯಲ್ಲಿ ದತ್ತಾಂಶ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ನಡೆದಿರುವ ಸಮೀಕ್ಷೆ ಕಾರ‌್ಯಾವಧಿಯನ್ನು ಜೂ ನ್1ರವರೆಗೆ ಮರು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಒಳ ಮೀಸಲು ವರ್ಗಿಕರಣಕ್ಕಾಗಿ ರಾಜ್ಯಸರ್ಕಾರ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆ ಯೋಗ ರಚಿಸಿದೆ. ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಕಾರ‌್ಯ ಕಳೆದ ಮೇ 5ರಿಂದ ಆರಂಭಗೊಂಡಿದೆ. ಆಯೋಗದ ಕಾರ‌್ಯದರ್ಶಿ ಅವರ ಆ ದೇಶದಂತೆ ಮನೆ,ಮನೆ ಭೇಟಿ ಸಮೀಕ್ಷೆ ಕಾರ‌್ಯವನ್ನು ಮೇ 29 ರವರೆಗೆ ಕೈಗೊಳ್ಳಲು ಮರು ವಿಸ್ತರಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ಮೊದಲನೇ ಹಂತದಲ್ಲಿ ಮನೆ,ಮನೆ ಭೇಟಿ ಸಮೀಕ್ಷೆ 29ರವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ,ಸಮೀಕ್ಷೆ ಬ್ಲಾ ಕ್‌ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು,ಮನೆ-ಮನೆ ಭೇಟಿ ಅವಧಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿ ಸಂಗ್ರಹಿಸುವ ಕಾರ‌್ಯ ಜೂನ್1ರವರೆಗೆ ಹಾಗೂ ಮೂರನೇ ಹಂತದಲ್ಲಿ ಸ್ವಯಂ ಘೋಷಣೆಯೊಂದಿಗೆ ಆನ್‌ಲೈನ್ ಸಮೀಕ್ಷೆ ಕಾರ‌್ಯವೂ ಕೂಡ ಜೂನ್ 1ರವರೆಗೆ ನಡೆಯಲಿದೆ. ಸಮೀಕ್ಷೆ ಸಂದರ್ಭಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಕುಟುಂಬದ ಸಂಪೂರ್ಣ ಮಾಹಿತಿ ನೀಡಿ ಸಮೀಕ್ಷೆಯನ್ನು ಯ ಶಸ್ವಿ ಗೊಳಿಸಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net