

ಎಂ.ಕೆ.ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ದಲಿತ ಸಂರ್ಷ ಸಮಿತಿ ವತಿಯಿಂದ ಸ್ಥಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರು ಶನಿವಾರ ಪ್ರತಿಭಟನೆ ನಡೆಯಿತು.
ಪಟ್ಟಣ ಪಂಚಾಯಿತಿ ಎಸ್ಸಿ, ಎಸ್ಟಿ ಅನುದಾನ ಸಮರ್ಪಕವಾಗಿ ಲಾನುಭವಿಗಳಿಗೆ ಮುಟ್ಟುತ್ತಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ. ವಾರ್ಡ್ ನಂ.3ರ ಡಾ.ಬಾಬು ಜಗಜೀವನರಾಮ್ ಭವನ ನಿರ್ಮಾಣ ಕಾರ್ಯರೂಪಕ್ಕೆ ಬರುತ್ತಿಲ್ಲ, ನಮಗೆ ಸ್ಮಶಾನ ಜಾಗವಿಲ್ಲ. ಸಿಸಿ ಚರಂಡಿ, ರಸ್ತೆಗಳ ಅಭಿವದ್ಧಿಯಾಗಿಲ್ಲ, ಮನೆ ಉತಾರ ಪಡೆಯಲು ಸಾಕಷ್ಟು ಅಲೆದಾಡಿಸುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಸಂದ ಮುಖಂಡರು, ಸಾರ್ವಜನಿಕರು ಆಕ್ರೋಶ ಹೊರಹಾಕಿದರು.
ಅತಿವಷ್ಟಿಯಿಂದ ಕುಸಿದ ಮನೆಗಳಿಗೆ ತಣವೇ ತಲಾ 5ಲ ರೂ. ಪರಿಹಾರ ನೀಡಬೇಕು. ಮನೆಗಳ ಬಾಕಿ ಬಿಲ್ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ತಣವೇ ಅಧಿಕಾರಿಗಳ ವಿರುದ್ಧ ಕ್ರಮ ಕೆಗೊಳ್ಳಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆಗೆ ಪರಿಹಾರ ನೀಡಬೇಕೆಂದು ಪಟ್ಟುಹಿಡಿದು ಪ್ರತಿಭಟನೆ ಮುಂದುವರಿಸಿದ್ದರು.
ಸ್ಥಳಕ್ಕಾಗಮಿಸಿದ ಕಿತ್ತೂರ ತಹಸೀಲ್ದಾರ್ ರವೀಂದ್ರ ಹಾದಿಮನಿ, ಎಲ್ಲ ಬೇಡಿಕೆಗಳನ್ನು 3 ತಿಂಗಳೊಳಗೆ ಈಡೇರಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದುವೇಳೆ ತಪ್ಪಿದರೆ, ಅಧಿಕಾರಿಗಳ ವಿರುದ್ಧ ಸೂಕ್ತಕ್ರಮಕೆಗೊಳ್ಳುವ ಭರವಸೆ ನೀಡಿದರು. ಹೀಗಾಗಿ ಪ್ರತಿಭಟನಾನಿರತರು ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೆಬಿಟ್ಟರು.
ರಾಜಶೇಖರ ಹಿಂಡಲಗಿ, ಆರ್.ಎಂ. ಚಲವಾದಿ, ಜ್ಯೋತೆಪ್ಪ ಪಾಗಾದ, ಎ.ಎಸ್.ಹಿಂಡಲಗಿ, ರುದ್ರಪ್ಪ ಕೊಡ್ಲಿ, ಅಶೋಕ ಕಲಾಲ, ದೇವೇಂದ್ರ ಐನವರ, ಎಂ.ಬಿ.ಸಾಹೇಬಖಾನ್, ಅಲ್ಲಾಬ ಬಾಗವಾನ್, ಬಸವರಾಜ ಪಾಗಾದ, ರಾವೇಂದ್ರ ಚಲವಾದಿ, ಮಹಾಂತೇಶ ಚಲವಾದಿ ಇತರರಿದ್ದರು.