

ಚಿಕ್ಕೋಡಿ: ರಸ್ತೆ ಅಪಘಾತ ಪ್ರಮಾಣ ತಡೆಯಲು ವಾಹನ ಚಾಲನಾ ತರಬೇತಿ ಬಹುಮುಖ್ಯ ಎಂದು ಆರ್ಟಿಒ ವಿಶಾಲ ಜಿ.ಪಿ. ಹೇಳಿದರು.
ಪಟ್ಟಣದ ತಾಲೂಕು ಮೋಟಾರ್ ಡೆವಿಂಗ್ ಶಾಲೆಯ ಮಾಲೀಕರ ಅಸೋಸಿಯೇಷನ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆವಿಂಗ್ ಶಾಲೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಎಸ್ಐ ಬಸವರಾಜ ನೇರ್ಲಿ ಮಾತನಾಡಿದರು. ಪ್ರವಾಸಿ ಮಂದಿರದಿಂದ ಆರ್ಟಿಒ ಕಚೇರಿಯ ಸ್ವಯಂಚಾಲಿತ ಚಾಲನಾ ಪರೀಾ ಪಥದಿಂದ ಆಡಳಿತ ಕಚೇರಿಯವರಿಗೆ ರ್ಯಾಲಿ ನಡೆಸಿ ಸಿಹಿ ಹಂಚಲಾಯಿತು.
ತಾಲೂಕು ಅಸೋಸಿಯೇಷನ್ ಅಧ್ಯ ಎಂ.ಆರ್.ಮುನ್ನೋಳ್ಳಿಕರ ಅಧ್ಯತೆ ವಹಿಸಿದ್ದರು. ಹಿರಿಯ ಮೋಟಾರು ವಾಹನ ನಿರೀಕ ಮಹೇಶ ಹನುಮಶೇಠ್, ಟ್ರಾಫಿಕ್ಪಿಎಸ್ಐ ಅನಿಲ ಅಮ್ಮಿನಭಾವಿ, ನಿಯಾಜ್ ಬುಡೇಖಾನ್, ವಿನಯ ಚೌಗಲಾ, ರಾಜು ಚಂದಗಡೆ, ಭಜರಂಗ ಮೋರೆ, ಜಯಶ್ರೀ ದೇಸಾಯಿ, ಸ್ವಪ್ನಿಲ್ ಅವಳೇಕರ, ರೋಹನ ಪವಾರ, ಸೂರಜ್ ನಾರೆ, ಶಫಿ ಕಂಕನವಾಡಿ, ಜ್ಯೋತಿರಾಮ ಪವಾರ, ಗಣಿ ಹಡಲಗಿ, ರಾಜು ಚಂದಗಡೆ ಇತರರಿದ್ದರು.