

ಚಿಕ್ಕಮಗಳೂರು: ಪರಿಣಿತ ಉಪನ್ಯಾಸಕ ವೃಂದದಿAದ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯಲ್ಲಿ ಭವಿಷ್ಯ ರೂಪಿಸಲು ಸಜ್ಜಾಗಿರುವ ಎಐಟಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಭಾಗ್ಯವಂತರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ತಿಳಿಸಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ಧ ಚುಂಚನ-೨೦೨೪ರ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಬಹಳಷ್ಟು ಅಪರೂಪವಾದುದು. ಕಳೆದ ಕ್ಷಣಗಳನ್ನು ಮರಳಿ ಪಡೆಯಲಾಗದು. ವಿದ್ಯಾರ್ಥಿ ಜೀವನದಲ್ಲಿ ಯುವಕ-ಯುವತಿಯರು ತುಂಟಾಟದ ಜೊತೆಗೆ ವಿದ್ಯಾಭ್ಯಾಸದ ಕಲಿಕೆಯಲ್ಲಿ ಹೆಚ್ಚಿ ನ ಆಸಕ್ತಿ ಹೊಂದುವ ಮೂಲಕ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದರು.
ಸ್ವಾಸ್ಥö್ಯ ಸಮಾಜ ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಇಂದಿನ ಯುವಸಮೂಹವೇ ದೇಶದ ಆಸ್ತಿ. ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಸಂಸ್ಕೃತಿ, ಸಂಸ್ಕಾರ, ಜಾನಪದ ಸೊಗಡು, ಸಾಹಿತ್ಯದಿಂದ ನಿರ್ಮಾಣಗೊಂಡ ನಾಡನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯಿAದ ಕುಟುಂಬ ಹಾಗು ಗುರುಶಿಷ್ಯರ ಸಂಬAಧಗÀಳು ನಶಿಸುತ್ತಿದೆ. ಹಿಂದಿನ ಸಮಯದಲ್ಲಿ ಶಾಲಾ ಗುರುಗಳು ದಂಡಿಸಿ ಮಕ್ಕಳ ವಿದ್ಯಾಭ್ಯಾಸವನ್ನು ಚುರುಕು ಗೊಳಿಸುತ್ತಿದ್ದರು. ಪ್ರಸ್ತುತ ಕಾಲಮಾನಕ್ಕೆ ಎಲ್ಲವೂ ಬದಲಾವಣೆಗೊಳ್ಳುತ್ತಿದೆ ಎಂದ ಅವರು ಪಾಲಕರು, ಗುರುಗಳಿಗೆ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಹಿAದಿನ ಕಾಲದಲ್ಲಿ ಜಾನಪದದ ತತ್ವ ಪದಗಳಿಂದ ಜೀವನದ ಪದ್ಧತಿ ಅಳವಡಿಸಿಕೊಂಡಿದ್ದರು. ಸ್ನೇಹ, ಪ್ರೀತಿ ಹಾಗೂ ಸಂಬAಧಗಳಿಗೆ ಬಹಳಷ್ಟು ಬೆಲೆಯಿತ್ತು. ಹೀಗಾಗಿ ವಿದ್ಯಾರ್ಥಿಗಳು ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ಸಮರ್ಪಕವಾಗಿ ನಡೆದರೆ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು.
ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್ ಮಾತನಾಡಿ, ವಿದ್ಯಾರ್ಥಿ ಬದುಕು ಅಮೂಲ್ಯವಾದುದು. ಕಲಿಕೆ ವೇಳೆಯಲ್ಲಿ ನಿರಂತರ ಅಭ್ಯಾಸಿಸಬೇಕು. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮುಂದೆ ಸಾಗಬೇಕು. ಇದನ್ನು ಹೊರತಾಗಿ ಬೇಜವಾಬ್ದಾರಿತನ ಮೈಗೂಡಿಸಿಕೊಂಡರೆ ಜೀವನ ದುಸ್ತರವಾಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.
ಇದೇ ವೇಳೆ ಚುಂಚನೋತ್ಸವದಲ್ಲಿ ವಿವಿಧ ಸ್ಪರ್ಧೆ ವಿಜೇತರಾದ ಹಾಗೂ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಜೆ ಪ್ರಾರಂಭಗೊAಡ ಚಂದನ್‌ಶೆಟ್ಟಿ ಗೀತೆ ಗಳಿಗೆ ಎರಡು ಗಂಟೆಗಳ ಕಾಲ ಕಾಲೇಜಿನ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ಸತ್ಯನಾರಾಯಣ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸಂಗರೆಡ್ಡಿ ಮತ್ತಿತರರಿದ್ದರು.