ಪರಿಣಾಮಕಾರಿ ಬೋಧನೆಗೆ ರಂಗ ಚಟುವಟಿಕೆ ಸಹಕಾರಿ

CTD RANGA....
Published on

ಚಿತ್ರದುರ್ಗ: ರಂಗಭೂಮಿ ಚಟುವಟಿಕೆಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡರೆ ಬೋಧನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ರಂಗ ವಿಮರ್ಶಕ ಡಾ.ವಿ.ಬಸವರಾಜ್ ಹೇಳಿದರು.

ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ನಗರದ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ರಂಗಭೂಮಿ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು.

ಶಿಕ್ಷಕ ವೃತ್ತಿಯಲ್ಲಿ ರಂಗ ಅಭಿವ್ಯಕ್ತಿಗೆ ಮೊದಲ ಪ್ರಾಮುಖ್ಯತೆ ಇದೆ. ಪ್ರಶಿಕ್ಷಣಾರ್ಥಿಗಳು ಹೆಚ್ಚಿನ ವಿಷಯಗಳನ್ನು ಅರಿತು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಆತ್ಮಸ್ಥೈರ್ಯ, ಸಹನೆ ಮತ್ತು ತಾಳ್ಮೆಗೆ ಸಹಕಾರಿಯಾಗುತ್ತದೆ ಎಂದರು.

ಉಪನ್ಯಾಸಕ ಡಾ.ಕೆ. ಮೋಹನ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಂಗಭೂಮಿ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮು ಖಗಳಿದ್ದಂತೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಜಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯ ಮಯೂರ ಯೋಗ, ಕ್ರೀಡಾ, ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಎಂ.ಬಿ. ಮುರುಳಿ, ಉಪನ್ಯಾಸಕ ಡಾ.ಕೆ. ಮೋಹನ್‌ಕುಮಾರ್, ಬಿ.ಎಸ್. ನಟರಾಜ್, ಸುದರ್ಶನ, ಎಸ್.ಟಿ. ಪದ್ಮಶ್ರೀ, ಎಂ. ಸ್ವಾತಿ, ಜಿ.ಎಸ್. ರಾಘವೇಂದ್ರ, ಅಧೀಕ್ಷಕ ಮಲ್ಲೇಶಪ್ಪ,ಸಂಪನ್ಮೂಲ ವ್ಯಕ್ತಿ ಕೆಪಿಎಂ ಗಣೇಶಯ್ಯ ಇದ್ದರು. ಕೆಪಿ ಎಂ ಗುರುದೇವ್ ಪ್ರಾರ್ಥಿಸಿದರು. ಎಂ.ಬಿ.ಮಂಜುನಾಥ್,ಸ್ವಾಗತಿಸಿ, ಯು.ನಿಂಗಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net