ಪರಿಣಾಮಕಾರಿ ಬೋಧನೆಗೆ ಕಲಿಕಾ ಸಂಪನ್ಮೂಲದ ಬಳಕೆ ಅಗತ್ಯ

ctd--00001
Published on

ಚಿತ್ರದುರ್ಗ: ಪಠ್ಯ ವಿಷಯವನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಅರ್ಥೈಸಲು ಕಲಿಕಾ ಸಂಪನ್ಮೂಲಗಳು ಮತ್ತು ತಂತ್ರಜ್ಞಾನ ಬಳಕೆ ಅಗತ್ಯವೆಂದು ಡ ಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು. ಹೊಳಲ್ಕೆರೆ ತಾಲೂಕು ತಾಳ್ಯದ ಶ್ರೀ ಆಂಜನೇಯಸ್ವಾಮಿ ಸಂಯುಕ್ತ ಪ.ಪೂ ಕಾಲೇಜು ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಕುರಿತು ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಶಿಕ್ಷಕರು ತರಗತಿ ನಿರ್ವಹಣೆಯಲ್ಲಿ ಕಲಿಕಾ ಸಂಪನ್ಮೂಲ ಮತ್ತು ತಂತ್ರಜ್ಞಾನ ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಸುಲಭ ವಾಗಿ ಅರ್ಥೈಸಿಕೊಳ್ಳುವರು. ಇದರಿಂದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಪರಿಣಾಮಕಾರಿಯಾಗುತ್ತದೆ ಎಂದರು.

ಮಕ್ಕಳಲ್ಲಿ ಪರೀಕ್ಷಾ ಒತ್ತಡ ನಿವಾರಣೆಗೆ ಆತ್ಮವಿಶ್ವಾಸ ತುಂಬಲು ಪ್ರಧಾನ ಮಂತ್ರಿ ಪರೀಕ್ಷಾ ಪೆ ಚರ್ಚಾ ಕಾರ‌್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸದ್ದಾರೆ. ನೋಂದಣಿಗೆ ಜ.14 ಕೊನೆ ದಿನವಾಗಿದ್ದು ಹೆಚ್ಚಿನ ಸಂಖ್ಯೆಲ್ಲಿ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಲು ಶಿಕ್ಷಕರು ಮ ಕ್ಕಳನ್ನು ಪ್ರೋತ್ಸಾಹಿಸಬೇಕೆಂದರು.

ತಾಳ್ಯ ಸಮೂಹ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ ಪ್ರಕಾಶ್ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು,ಶಿಕ್ಷಕರ ನೋಂದಣಿ ಕು ರಿತು ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಕೆ.ಸಿ.ರಶ್ಮಿ,ಶಿಕ್ಷಕರಾದ ಎಸ್.ಎಚ್ ಶಾಂತಕುಮಾರ, ಜೆ.ನಾಗರಾಜ,ಡಿ.ಕೆ ವೇದಮೂರ್ತಿ,ಪಿ.ಎ.ಸಂಧ್ಯಾ,ಜಿ.ಎಂ ಜ್ಯೋತಿ ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net