ಪರಾರಿಯಾಗಿದ್ದ ಆರೋಪಿ ಸೆರೆ

Arrest Kaidhi
Published on

ಶಿವಮೊಗ್ಗ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಕುಣುಜೆ ಮಂಜುನಾಥ ಗೌಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶೃಂಗೇರಿ ಸಮೀಪ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿರುವುದನ್ನು ಪತ್ತೆ ಮಾಡಿ ಬಂಧಿಸಲಾಗಿದೆ.

ತೀರ್ಥಹಳ್ಳಿ ತಾಲೂಕು ಶಿರನಲ್ಲಿ ಬಳಿ ಮೇ 27ರ ರಾತ್ರಿ ಬುಲೆಟ್​ನಲ್ಲಿ ಓಡಾಡುವುದರಿಂದ ವಿಪರೀತ ಶಬ್ದವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಮಂಜುನಾಥ ಗೌಡ, ಇದೇ ಕಾರಣಕ್ಕೆ ರಾಮಚಂದ್ರ ನಾಯ್್ಕ ಎಂಬುವರ ಕಾಲಿಗೆ ಗುಂಡು ಹಾರಿಸಿದ್ದ ಎಂದು ದೂರು ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ನಾಯ್್ಕ ಹಾಗೂ ಆತನ ಕುಟುಂಬದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಿಸಿದ್ದ ಮಂಜುನಾಥ ಗೌಡ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಮರುದಿನ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದ.

ಪರಾರಿಯಾಗಿದ್ದ ಮಂಜುನಾಥ ಗೌಡನ ಬಂಧನಕ್ಕೆ ಎಸ್ಪಿ ಕೆ.ಎಂ.ಶಾಂತರಾಜು ವಿಶೇಷ ತಂಡ ರಚಿಸಿದ್ದರು. ಸಿಪಿಐ ಅಭಯ ಪ್ರಕಾಶ್ ಸೋಮನಾಳ್ ನೇತೃತ್ವದ ತಂಡದಲ್ಲಿ ರೌಡಿ ನಿಗ್ರಹ ದಳ ಸಿಬ್ಬಂದಿಗಳಾದ ಅಶೋಕ್, ಕಿರಣ್, ಸಂದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net