ಪರಹಿತ ಬಯಸುವುದು ಪುಣ್ಯಾತ್ಮರ ಕೆಲಸ

mlp 14 health
ಮಹಾಲಿಂಗಪುರದಲ್ಲಿ ಜಂಗಮ ಸಮಾಜದಿಂದ ನಡೆದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಸಮಾಜದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಸಾಗರ ಮಠದ ಇದ್ದರು.
Published on

ಮಹಾಲಿಂಗಪುರ: ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಬಡವರ ಆರೋಗ್ಯದ ಆಶಾಕಿರಣಗಳಾಗಿವೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.

ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆ ಮತ್ತು ಸ್ಥಳೀಯ ಜಂಗಮ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಪ್ರಗತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸೇವೆಯೇ ಜನಾರ್ಧನ ಸೇವೆ. ಪರಹಿತ ಬಯಸುವುದು ಪುಣ್ಯಾತ್ಮರ ಕಾರ್ಯವಾಗಿದೆ. ಸಮಾಜ, ಸಂಘ-ಸಂಸ್ಥೆಗಳು ಪ್ರತಿಯೊಂದು ಹಳ್ಳಿ ಪಟ್ಟಣಗಳಲ್ಲಿ ಆರೋಗ್ಯ ಉಚಿತ ತಪಾಸಣೆ ಅಥವಾ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆಯಬೇಕಾಗಿದೆ. ಆ ನಿಟ್ಟಿನಲ್ಲಿ ಮಹಾಲಿಂಗಪುರದ ಜಂಗಮ ಸಮಾಜ ಈ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಜಂಗಮ ಯುವ ವೇದಿಕೆ ಅಧ್ಯಕ್ಷ ಸಾಗರ ಮಠದ, ಪ್ರಗತಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಬಸವರಾಜ ಮಾನೆ ಮಾತನಾಡಿದರು.

ನರರೋಗ ತಜ್ಞ ಡಾ. ರಾಕೇಶ ಎ.ವಿ., ಎಲುವು ಕೀಲುಗಳ ತಜ್ಞ ಡಾ. ಸಚಿನ್ ಕಟ್ಟಿ, ಕಿಡ್ನಿ ತಜ್ಞ ಡಾ. ಗಂಗಾಧರ ಚಿರಾಗ ಭಾಗಿಯಾಗಿ ಬಿಪಿ, ಶುಗರ್, ನರರೋಗ, ಕಿಡ್ನಿ, ಎಲುವು-ಕೀಲು ಮತ್ತು ಇನ್ನಿತರ ರೋಗಗಳ ತಪಾಸಣೆ ನಡೆಸಿದರು. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಿದರು. ಅಂದಾಜು 200ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಜಂಗಮ ಸಮಾಜದಿಂದ ವೈದ್ಯರಿಗೆ ಆದಿ ವಚನ ಪಿತಾಮಹ ಗುರು ರೇಣುಕಾಚಾರ್ಯರ ಭಾವಚಿತ್ರ ನೀಡಿ ಗೌರವಿಸಲಾಯಿತು.

ಸ್ಥಳೀಯ ಜಂಗಮ ಸಮಾಜದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ, ಡಾ. ಸಿ. ಎಂ. ವಜ್ರಮಟ್ಟಿ, ವಿ.ಐ. ಪಂಚಕಟ್ಟಿಮಠ,ನ್ಯಾಯವಾದಿ ಎಂ.ಎಸ್. ಮನ್ನಯ್ಯನವರಮಠ, ಮಹಾಂತೇಶ ಮನ್ನಯ್ಯನವರಮಠ, ಬಸವರಾಜ ಅಯ್ಯನಗೌಡರ, ಮೃತ್ಯುಂಜಯ ಮಠಪತಿ, ಜಗದೀಶ ಮಠಪತಿ, ಈರಣ್ಣ ಚಟ್ಟಿಮಠ, ಸದಾಶಿವ ಹಿರೇಮಠ ಇತರರಿದ್ದರು.

ಗುರುಲಿಂಗಯ್ಯ ಮಠಪತಿ ಸ್ವಾಗತಿಸಿದರು. ಚೆನ್ನಯ್ಯ ಮಸಗುಪ್ಪಿಮಠ ವಂದಿಸಿದರು. ಶಿಬಿರಾರ್ಥಿಗಳಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net