

ಚಿತ್ತಾಪುರ: ಬಡ ಜನತೆ ಉಪವಾಸದಿಂದ ಬಳಲಬಾರದು ಎಂಬ ಉದ್ದೇಶದಿಂದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ಉಚಿತವಾಗಿ ಕಿಟ್ ವಿತರಿಸಲು ಮನವಿ ಮಾಡಿದ್ದರು. ಅವರ ಫಲವಾಗಿಯೇ ಎಲ್ಲರಿಗೂ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಪ್ರತಿಪಕ್ಷದ ನಾಯಕ ಶಿವಾನಂದ ಪಾಟೀಲ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸವಿತಾ, ಹಡಪದ ಸಮಾಜ ಹಾಗೂ ಆಟೋ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಉಮಾಕಾಂತ ಹಳ್ಳೆ ಅವರು ದಿನಸಿ ಕಿಟ್ ವಿತರಿಸಿ ಮಾತನಾಡಿ, ಸವಿತಾ ಸಮಾಜದ- 165, ಹಡಪದ ಸಮಾಜದ- 350 ಹಾಗೂ ಆಟೋ ಚಾಲಕರಿಗೆ 270 ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ಜಿಪಂ ಸದಸ್ಯ ಶಿವರುದ್ರ ಭೇಣಿ ಮಾತನಾಡಿದರು. ತಾಪಂ ಅಧ್ಯಕ್ಷ ಜಗದೇವರೆಡ್ಡಿ ರಾಮತೀರ್ಥ, ಗ್ರೇಡ್-2 ತಹಸೀಲ್ದಾರ್ ರವೀಂದ್ರ ದಾಮಾ, ಶಿರಸ್ತೆದಾರ ಶ್ರೀಮಂತ ಪಟ್ಟೇದಾರ, ಪ್ರಮುಖರಾದ ರವೀಂದ್ರರೆಡ್ಡಿ ಭಂಕಲಗಿ, ಮಹೇಶ ಕಾಶಿ, ಬಸವರಾಜ ಸುಗೂರ, ರಮೇಶ ಕೊಲ್ಲೂರ್, ಸೋಮಶೇಖರ, ಭೀಮರಾವ ಹಡಪದ, ನಾಗು ಸಾತನೂರ, ಅಶೋಕ ಹಡಪದ, ಆನಂದ ಕಾಶಿ, ಕಲ್ಯಾಣಿ ಹಡಪದ, ಮಲ್ಲಿಕಾಜರ್ುನ ಹಡಪದ, ಯಲ್ಲಪ್ಪ, ಗುರು, ಮಹಾದೇವ, ಬಸವರಾಜ ಮುಡಬೂಳ, ಮಲ್ಲಿನಾಥ ಹಡಪದ ಇತರರಿದ್ದರು.