ಪರವಾನಗಿವುಳ್ಳ ಗನ್ ಹೊಂದಿದ್ದ ಆಸಿಫ್:ಐಜಿಪಿ ಬೋರಲಿಂಗಯ್ಯ

ಪರವಾನಗಿವುಳ್ಳ ಗನ್ ಹೊಂದಿದ್ದ ಆಸಿಫ್:ಐಜಿಪಿ ಬೋರಲಿಂಗಯ್ಯ
Published on

ಹಾಸನ: ನಗರದಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಎಲ್ಲಾ ಆಯಾಮದಿಂದಲೂ ಕೂಡ ತನಿಖೆ ನಡೆಸಲಾಗುವುದು ಎಂದು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ತಿಳಿಸಿದರು.
ಹೊಯ್ಸಳ ನಗರದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬಡಾವಣೆ ಠಾಣೆಯ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಆಸಿಫ್ ಪರವಾನಗಿವುಳ್ಳ ಗನ್ ಹೊಂದಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದಾಗಿ ತನಿಖೆ ನಡೆಸಲಾಗುವುದೆಂದು ಹೇಳಿದರು.
ಶರಾಫತ್ ಅಲಿ ಮೂಲತಃ ಬಿಹಾರದವರು. ಚಿಕ್ಕ ವಯಸ್ಸಿನಲ್ಲೇ ಹಾಸನಕ್ಕೆ ಬಂದು ನೆಲೆಸಿದ್ದರು. ಅಲ್ಲದೆ ಆಸಿಫ್ ಬೆಂಗಳೂರಿನವನಾಗಿದ್ದು ಆತ ಹಾಸನದ ಯುವತಿಯನ್ನು ಮದುವೆಯಾಗಿದ್ದರು. ಇಬ್ಬರು ಸ್ನೇಹಿತರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net