ಪರವಾನಗಿ ಇಲ್ಲದಿದ್ದರೆ ಪರಿಹಾರವಿಲ್ಲ

09KUDLIGI1
Published on

ಕೂಡ್ಲಿಗಿ: ಎಪಿಎಂಸಿಯಲ್ಲಿ ಪರವಾನಗಿ ಹೊಂದಿರುವ ಹಮಾಲಿಗಳಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದ್ದು ಅದರ ಪ್ರಯೋಜನ ಪಡೆಯಬೇಕು ಎಂದು ಎಪಿಎಂಸಿ ಅಧ್ಯಕ್ಷ ಎಂ.ಬೋಸಯ್ಯ ತಿಳಿಸಿದರು.

ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ಹಮಾಲಿ ಜಗದೀಶ್ ಅವರ ಪತ್ನಿ ಜಿ.ಸುನೀತಾಗೆ ಕಾಯಕ ಯೋಜನೆಯಡಿ ಅಂತ್ಯಸಂಸ್ಕಾರದ ಪರಿಹಾರ ಧನ 25 ಸಾವಿರ ರೂ. ಚೆಕ್ ವಿತರಿಸಿ ಸೋಮವಾರ ಮಾತನಾಡಿದರು. ಎಪಿಎಂಸಿಯಿಂದ ಜೀವ ವಿಮೆ ಹಣವನ್ನು ಪ್ರತಿವರ್ಷ ಸಂದಾಯ ಮಾಡಲಾಗುತ್ತಿದೆ. ಹಮಾಲಿಗಳು ಮೃತಪಟ್ಟರೆ ಅವರ ಕುಟುಂಬದವರಿಗೆ ಅಂದಾಜು ಎರಡು ಲಕ್ಷ ರೂ. ಬರಲಿದೆ. ಕೆಲಸದ ವೇಳೆ ಹಮಾಲಿಗಳು ಶಾಶ್ವತ ಅಂಗವೈಕಲ್ಯ ಹೊಂದಿದರೆ ಪರಿಹಾರ ನೀಡಲಾಗುತ್ತದೆ. ಹಮಾಲಿಗಳು ಪ್ರತಿ ವರ್ಷ ಪರವಾನಗಿ ನವೀಕರಣ ಮಾಡಿಸಬೇಕು. ಪರವಾನಗಿ ಪಡೆಯದಿದ್ದರೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹಮಾಲಿಗಳು ಕರ್ತವ್ಯದ ವೇಳೆ ಜೀವ ಹಾನಿಯಾಗದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು, ತರಾತುರಿ ಮಾಡದೆ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರತಿದಿನದ ಗಳಿಕೆಯನ್ನು ಮದ್ಯವ್ಯಸನ ಸೇರಿದಂತೆ ಇತರ ದುಶ್ಚಟಗಳಿಗೆ ಪೋಲು ಮಾಡದೆ ಕುಟುಂಬದ ಹಿತದೃಷ್ಟಿಯಿಂದ ಉಳಿಕೆ ಮಾಡಿ ಎಂದು ಬೋಸಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net