ಪರಮೇಶ್ವರ್‌ಗೆ ಸಿಎಂ ಹುದ್ದೆ ನೀಡಿ

CTD 17 Parameshwar -04
Published on

ಚಿತ್ರದುರ್ಗ: ರಾಜಕೀಯದಲ್ಲಿ ಅಪಾರ ಅನುಭವವುಳ್ಳ ಡಾ.ಜಿ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡಬೇಕು. ಇಲ್ಲದಿದ್ದರೆ, ಉಪ ಮುಖ್ಯಮಂತ್ರಿ ಸ್ಥಾನವಾದರೂ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ವಿಶ್ವ ಛಲವಾದಿ ಮಹಾಸಭಾ ಪದಾಧಿಕಾರಿಗಳು, ಕಾರ್ಯಕರ್ತರು ಎಐಸಿಸಿ, ಕೆಪಿಸಿಸಿಗೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಎಸ್ಸಿ,ಎಸ್ಟಿ ಸಮುದಾಯಗಳ ಬಹುತೇಕ ಮತಗಳನ್ನು ಈ ಬಾರಿ ಕಾಂಗ್ರೆಸ್ ಪಡೆಯುವಲ್ಲಿ ಡಾ.ಜಿ.ಪರಮೇಶ್ವರ್ ಅವರೂ ಕಾರಣರಾಗಿದ್ದಾರೆ. ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ವೇಳೆ ಸಾಮಾಜಿಕ ನ್ಯಾಯದಡಿ ಸೂಕ್ತ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಪರಮೇಶ್ವರ್‌ಗೆ ಈ ಹಿಂದೆ ಆಡಳಿತ ನಡೆಸಿರುವ ದಕ್ಷತೆ ಮತ್ತು ಅನುಭವ ಇದ್ದು, ಉನ್ನತ ಸ್ಥಾನ ಅಲಂಕರಿಸಲು ಅರ್ಹರಾಗಿ ದ್ದಾರೆ. ತನ್ನದೇ ವ್ಯಕ್ತಿತ್ವ, ವರ್ಚಸ್ಸು ರೂಪಿಸಿಕೊಂಡ ರಾಜಕಾರಣಿಯೂ ಹೌದು. ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನೈಪುಣ್ಯತೆ, ಸಂವಿಧಾನದ ಆಶಯ ಈಡೇರಿಸುವ ಜಾಣ್ಮೆಯೂ ಇದೆ. ಹೀಗಾಗಿ ಪರಿಗಣಿಸಲೇಬೇಕು ಎಂದು ಮನವಿ ಮಾಡಿದರು.
ಮಹಾಸಭಾ ರಾಜ್ಯ ಉಪಾಧ್ಯಕ್ಷ ಓಂಕಾರ್‌ಮೂರ್ತಿ, ಮುಖಂಡರಾದ ಟಿ.ಎನ್.ಕೋಟೆ ರಾಮಕೃಷ್ಣ, ಗೋಸಿಕೆರೆ ನರಸಿಂಹ, ಮಂಜುಳಮ್ಮ,ಡಿ.ಎಸ್.ಹಳ್ಳಿ ಜಗದೀಶ್, ನರಸಿಂಹಮೂರ್ತಿ, ಲಕ್ಷ್ಮಿಪತಿ, ಮಹಾಂತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net