ಪರಮೇಶ್ವರಪ್ಪ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

5 ckm 4
ಪ್ರತಿಷ್ಠಿತ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಜಾನಪದ ಕಲಾವಿದ ಬೆಳವಾಡಿಯ ಬಿ.ಪಿ. ಪರಮೇಶ್ವರಪ್ಪ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳು ಬೆಳವಾಡಿಯ ಅವರ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು.
Published on

ಚಿಕ್ಕಮಗಳೂರು: ಜಿಲ್ಲೆಯ ಹಿರಿಯ ಭಜನಾ ಕಲಾವಿದ, ಜಿಲ್ಲಾ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಬೆಳವಾಡಿಯ ಬಿ.ಪಿ. ಪರಮೇಶ್ವರಪ್ಪ ಅವರಿಗೆ ಪ್ರತಿಷ್ಠಿತ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ತಾಲೂಕಿನ ಬೆಳವಾಡಿಯಲ್ಲಿ ಶ್ರೀಬಸವೇಶ್ವರ ಭಜನಾ ಕಲಾಸಂಘ ಸ್ಥಾಪಿಸಿ. ಭಜನಾ ತಂಡವನ್ನು ಕಟ್ಟಿಕೊಂಡು ಕಳೆದ ೫೦ ವರ್ಷಗಳಿಂದ ಮನೆ ಮನೆಗಳಲ್ಲಿ ಭಜನೆ ಕಾರ್ಯಕ್ರಮ ನಡೆಸುತ್ತಿರುವ ಪರಮೇಶ್ವರಪ್ಪ ಅವರು ೨೦೨೩ರಲ್ಲಿ ನಗರದಲ್ಲಿ ನಡೆದ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಪರಮೇಶ್ವರಪ್ಪ ಅವರಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿದ ಸುದ್ದಿ ತಿಳಿಯುತ್ತಿದ್ದಂತೇ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳು ಬೆಳವಾಡಿಯ ಅವರ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಬಸವರಾಜ್ ಮಾತನಾಡಿ, ಪರಮೇಶ್ವರಪ್ಪ ಅವರಿಗೆ ಪ್ರಶಸ್ತಿ ಬಂದಿರುವುದು ಗ್ರಾಮಕ್ಕೆ ಹೆಮ್ಮೆ ಮತ್ತು ಕೀರ್ತಿ ತಂದಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಜಾನಪದ ಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವ ಪರಮೇಶ್ವರಪ್ಪ ಅವರಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ಉದ್ಭವ ಗಣಪತಿ ದೇವಾಲಯದ ವ್ಯವಸ್ಥಾಪಕ ಗಣೇಶ್ ಮೂರ್ತಿ ಮಾತನಾಡಿ, ಗ್ರಾಮದ ಯುವಕರು ಪರಮೇಶ್ವರಪ್ಪ ಅವರನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಲಕ್ಯಾ ಹೋಬಳಿ ಅಧ್ಯಕ್ಷ ಬೆಳವಾಡಿ ಪ್ರಕಾಶ್, ಶಂಕರೇಗೌಡ, ಶಿಕ್ಷಕರಾದ ಸಿದ್ದಪ್ಪ, ಶಂಕರಯ್ಯ, ಬಿ.ಎಸ್. ನಂಜುAಡಪ್ಪ, ಧರ್ಮೇಂದ್ರ, ಬಿ.ಡಿ. ನಂಜುAಡಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net