ಪ್ರತಿಭೆ ಅನಾವರಣಕ್ಕೆ ಚಿಣ್ಣರ ಮೇಳ ವೇದಿಕೆ

nrp 1 A
ಎನ್.ಆರ್.ಪುರದಲ್ಲಿ ರಾಜ್ಯಮಟ್ಟದ ಚಿಣ್ಣರ ಮೇಳ ಸಮಾರೋಪದಲ್ಲಿ ವಿದುಷಿ ಸುಮನಾ ಅವರನ್ನು ಸನ್ಮಾನಿಸಲಾಯಿತು. ಧನಂಜಯ, ಎನ್.ಎಂ.ಕಾಂತರಾಜ್, ಅಂಕಿತಾ, ಸುಮ, ಪ್ರಜ್ವಲ್ ಇತರರಿದ್ದರು.
Published on

ನ್.ಆರ್.ಪುರ: ಮಕ್ಕಳ ಸುಪ್ತ ಪ್ರತಿಭೆ ಹೊರ ಹಾಕಲು ಚಿಣ್ಣರ ಮೇಳ ಉತ್ತಮ ವೇದಿಕೆ ಎಂದು ಸಮಾಜ ಸೇವಕಿ ಜುಬೇದಾ ಹೇಳಿದರು.

ಬುಧವಾರ ರಾಗಮಯೂರಿ ಅಕಾಡೆಮಿ ಆಯೋಜಿಸಿದ್ದ ಚಿಣ್ಣರ ಕಲರವ ರಾಜ್ಯಮಟ್ಟದ ಚಿಣ್ಣರ ಮೇಳ ಸಮಾರೋಪದಲ್ಲಿ ಮಾತನಾಡಿ, ರಾಗಮಯೂರಿ ಅಕಾಡೆಮಿ ಮುಖ್ಯಸ್ಥೆ ಅಂಕಿತಾ ಚಿಣ್ಣರ ಮೇಳ ಆಯೋಜಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಕಲಾವಿದರಿಂದ ಮಕ್ಕಳಿಗೆ ಹಾಸ್ಯ, ನಾಟಕ, ನೃತ್ಯ ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಕ್ಕಳ ಸಾಂಸ್ಕೃತಿಕ ಪ್ರತಿಭೆ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ ಎಂದರು.
ರಾಗಮಯೂರಿ ಅಕಾಡೆಮಿ ಅಂಕಿತಾ ಮಾತನಾಡಿ, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪಾಲಕರು ಅವರಿಗೆ ಸಹಕಾರ ನೀಡಿದರೆ ಮಾತ್ರ ಪ್ರತಿಭೆ ಬೆಳೆಯಲು ಸಾಧ್ಯವಾಗುತ್ತದೆ. ಮೊಬೈಲ್, ಟಿ.ವಿಗೆ ಮಾರುಹೋಗಿರುವ ಮಕ್ಕಳನ್ನು ಇಂಥ ಶಿಬಿರಗಳಿಗೆ ಸೇರಿಸಿ ಕಲೆಗಳನ್ನು ಕರಗತಗೊಳಿಸಬೇಕು ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ರಾಗಮಯೂರಿ ಅಕಾಡೆಮಿ ಮೊದಲು ಒಂದಂಕಿಯಿಂದ ಪ್ರಾರಂಭವಾಗಿ ನೂರಾರು ಮಕ್ಕಳಿಗೆ ನೃತ್ಯ, ಸಂಗೀತ ಕಲಿಸುವ ಹೆಮ್ಮರವಾಗಿ ಬೆಳೆದಿದೆ. ಇಂಥ ಅಕಾಡೆಮಿಗಳು ಮಕ್ಕಳಿಗೆ ವೇದಿಕೆಗಳನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ರಾಜ್ಯ ಮಟ್ಟದ ಚಿಣ್ಣರ ಮೇಳ ಆಯೋಜಿಸಿರುವುದರಿಂದ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.
ವಿದುಷಿ ಸುಮನಾ ಪ್ರಸಾದ್, ರಂಗಭೂಮಿ ಕಲಾವಿದ ಮಿಥುನ್‌ಕುಮಾರ್ ಸೋನಾ ಅವರನ್ನು ಸನ್ಮಾನಿಸಲಾಯಿತು. ಚಿಣ್ಣರ ಮೇಳದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಮಡಬೂರು ಜಮೀನ್ದಾರ ಧನಂಜಯ, ಮಿಮಿಕ್ರಿ ಕಲಾವಿದೆ ಸಾಯಿಶ್ರುತಿ ಪಿಲಿಕಜೆ, ಸಾವಯವ ಕೃಷಿಕ ಎನ್.ಶ್ರೀನಾಥ್, ರಾಗಮಯೂರಿ ಅಕಾಡೆಮಿ ಕಾರ್ಯದರ್ಶಿ ಪ್ರಜ್ವಲ್ ಗೌಡ, ಆಲಂದೂರು ನಂದಿನಿ, ಸುನೀತಾ, ಅನಿತಾ ಶ್ರೀನಾಥ್ ಮತ್ತು ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net