ಪ್ರತಿನಿಧಿಗಳಿಗೆ ಮಾಸಾಶನ ಜಾರಿಯಾಗಲಿ

9 GVT 05
ಗಂಗಾವತಿಯಲ್ಲಿ ಎಲ್‌ಐಸಿ ಪ್ರತಿನಿಧಿಗಳ ಸಂಘದಿಂದ(ಲಿಖೈ) ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 5ನೇ ಮಹಾಸಮ್ಮೇಳನವನ್ನು ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಲ್.ಮಂಜುನಾಥ ಉದ್ಘಾಟಿಸಿದರು. ವ್ಯವಸ್ಥಾಪಕ ಖಲೀಲ್ ಆಹ್ಮದ್, ಉಪವ್ಯವಸ್ಥಾಪಕ ವಿಶ್ವನಾಥ ಹೂಗಾರ, ಅಭಿವೃದ್ಧಿ ಅಧಿಕಾರಿಗಳಾದ ಣಿರಾಜ್, ರಾಮಣ್ಣ ಕುರಿ, ಸಂಘದ ವಿಭಾಗೀಯ ಅಧ್ಯಕ್ಷ ಶ್ರೀನಿವಾಸ ಇತರರಿದ್ದರು.
Published on

ಗಂಗಾವತಿ: ಎಲ್‌ಐಸಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಆಡಳಿತ ಮಂಡಳಿ ಪ್ರತಿನಿಧಿಗಳ ಕಮಿಷನ್ ಮತ್ತು ಬೋನಸ್ ಹೆಚ್ಚಿಸುವಲ್ಲಿ ಕೇಂದ್ರ ಸರ್ಕಾರ ವಿಲವಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದ(ಲಿಖೈ) ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಲ್.ಮಂಜುನಾಥ ಹೇಳಿದರು.

ನಗರದ ಕನ್ನಡ ಜಾಗೃತಿ ಭವನದ ಆವರಣದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದಿಂದ(ಲಿಖೈ) ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 5ನೇ ಮಹಾಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಎಲ್‌ಐಸಿಯಲ್ಲಿ 54 ಲಕ್ಷ ಕೋಟಿಗಳ ವ್ಯವಹಾರ ನಡೆಸುತ್ತಿದ್ದು, ಪಾರದರ್ಶಕತೆ ಕಾಯ್ದುಕೊಂಡಿದೆ. ಬ್ಯಾಂಕ್ ಮತ್ತು ಮೈಕ್ರೋ ೈನಾನ್ಸ್ ಮೂಲಕ ಪಾಲಿಸಿ ಮಾರಾಟ ಯೋಜನೆ ಗ್ರಾಹಕರಿಗೆ ಮಾರಕವಾಗಿದೆ. ಇದರಿಂದ ಒಂದು ವರ್ಷದಲ್ಲಿ ಶೇ.40 ಪಾಲಿಸಿಗಳು ರದ್ದಾಗಿವೆ. ಖಾಸಗಿ ಕಂಪನಿಗಳ ಒತ್ತಡದಿದ್ದ ಅಸ್ತಿತ್ವಕ್ಕೆ ಬಂದ ವಿಮಾ ನಿಯಂತ್ರಣ ಮಂಡಳಿ, ಪ್ರತಿನಿಧಿಗಳು ಮತ್ತು ಗ್ರಾಹಕರನ್ನು ಶೋಷಿಸುವ ನಿರ್ಧಾರ ತೆಗೆದುಕೊಳ್ಳುತ್ತಿದೆ. ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರತಿನಿಧಿಗಳಿಗೆ ಮಾಸಾಶನ ಯೋಜನೆ ಜಾರಿಗೊಳಿಸಬೇಕು ಎಂದರು.
ಪದಾಧಿಕಾರಿಗಳಾದ ಕುಬೇರಪ್ಪ, ಬಷೀರ್, ಭಾರತಿ, ಸರಸ್ವತಿ, ವಿಜಯಲಕ್ಷ್ಮೀ, ಬಸವರಾಜ ಸಜ್ಜನ್, ಕೆ.ನಿಂಗಜ್ಜ, ಎಂ.ನಿರುಪಾದಿಬೆಣಕಲ್, ತಬರೀಶ, ಖಾಜಾವಲಿ ಇತರರಿದ್ದರು.


ಪದಾಧಿಕಾರಿಗಳ ಆಯ್ಕೆ:
ಷಡಕ್ಷರಿ ಸುಂಕದ್ (ಗೌರವಾಧ್ಯಕ್ಷ), ಎ.ಎಂ.ಮಂಜುನಾಥಸ್ವಾಮಿ (ಅಧ್ಯಕ್ಷ), ಜೆ.ಹುಸೇನ್‌ಬಾಷಾ (ಕಾರ್ಯದರ್ಶಿ), ಪಂಪಣ್ಣ ಪಟ್ಟಣಶೆಟ್ಟಿ (ಖಜಾಂಚಿ), ವಿರೂಪಾಕ್ಷಗೌಡ ಆರಾಳ್, ಶಂಕ್ರಪ್ಪ ಗದ್ದಿಗೇರಿ, ಎ.ಜೋಶಿ, ಮಹೆಬೂಬ್ ಹುಸೇನ್ (ಉಪಾಧ್ಯಕ್ಷರು), ಮೈಲಾರಪ್ಪ ವಾಲೀಕರ್, ಹುಸೇನ್ ಬಾಷಾ, ವೀರೇಶ ಕಾಂಬ್ಳೆ, ವೀರನಗೌಡ ಸಿದ್ದಾಪುರ (ಸಹ ಕಾರ್ಯದರ್ಶಿಗಳು), ಎ.ಭಾರತಿ, ವಿಜಯಲಕ್ಷ್ಮಿ (ಸಂಘಟನಾ ಕಾರ್ಯದರ್ಶಿ), ಕುಬೇರಪ್ಪ, ಬಸವರಾಜ್ ಸಜ್ಜನ್, ನಿರುಪಾದಿ ಬೆಣಕಲ್, ಕೆ.ನಿಂಗಜ್ಜ, ದುರ್ಗಾ ಪ್ರಸಾದ, ಶ್ರೀನಿವಾಸ್‌ರಾವ್ ಕುಲಕರ್ಣಿ, ಖಾಜಾವಲಿ, ಎಚ್. ಈಶ್ವರ್ (ಸಲಹಾ ಸಮಿತಿ ಸದಸ್ಯರು), ರಾಘವೇಂದ್ರ ದೇಸಾಯಿ ಇವರನ್ನುಆಂತರಿಕ ಲೆಕ್ಕಪರಿಶೋಧಕರಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net