

ಚಿತ್ರದುರ್ಗ: ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಭಾರತವನ್ನು ಅನೇಕ ವರ್ಷ ಪರಕೀಯರು ಆಳಿದ್ದಾರೆ. ಆದರೆ, ಸಂಪ್ರದಾಯವನ್ನು ಮಾತ್ರ ಭಾರತೀಯರು ಬಿಡಲಿಲ್ಲ ಎಂದು ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಹೇಳಿದರು.
ಹೋಟೆಲ್ ರವಿಮಯೂರದಲ್ಲಿ ಶನಿವಾರ ನಡೆದ ನಿತ್ಯಕಲ್ಯಾಣ ಮನೆ- ಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿ, ಮೂಲ ಸಂಸ್ಕೃತಿ ಉಳಿಸಿಕೊಂಡು ಬಂದಿರುವ ಭಾರತೀಯರೇ ಶ್ರೇಷ್ಠರು ಎಂದು ಬಣ್ಣಿಸಿದರು.
ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಇಡೀ ವಿಶ್ವಕ್ಕೆ ಕಾಯಕ, ದಾಸೋಹ ಸಮಾನತೆಯ ಪರಿಕಲ್ಪನೆಯ ಇತಿಹಾಸ ನೀಡಿದವರು ಬಸವಾದಿ ಪ್ರಮಥರು ಎಂದು ಹೇಳಿದರು.
ಬಿ.ವಿಶ್ವನಾಥ್, ಪ್ರಸನ್ನಕುಮಾರ್, ಡಾ.ನಾಗಭೂಷಣ, ತ್ರಿವೇಣಿ ಪ್ರಸನ್ನಕುಮಾರ್, ಟಿ.ಪಿ.ಜ್ಞಾನಮೂರ್ತಿ ಇತರರಿದ್ದರು.