

ಬಾಗಲಕೋಟೆ: ನಾವು ಶಿಕ್ಷಣ ಕಲಿತ ಎಷ್ಟೆ ದೊಡ್ಡವರಾದರು ತಂದೆ ತಾಯಿಯ ಹಾಗೂ ಕಲಿಸಿದ ಗುರುಗಳ ಋಣವನ್ನು ಮರೆಯಬಾರದು, ಈ ಮಾತೃ ದೇವೋಭವ,ಪೀತೃ ದೇವೋಭವ,ಗುರು ದೇವೋಭವ ಮೂಲ ಪರಂಪರೆಯನ್ನು ಉಳಿಸಿ ಬೆಳಸುವ ಕಾರ್ಯ ವಿದ್ಯಾರ್ಥಿಗಳ ಮೇಲಿದೆ ಎಂದು ಲೆಕ್ಕ ಪರಿಶೋಧಕ ಶಿವಾನಂದ ಮಾಳಗಾವಿ ಹೇಳಿದರು.
ನಗರದ ಬಿ.ವಿ.ವಿ.ಸಂಘ, ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಮರ್ಸ್ ವಿಭಾಗವುದಿಂದ ನೂತನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಫ್ರೆಶ್ಟೋಪಿಯಾ 2024ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಶಿಕ್ಷಣ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ನಮಗೆ ಗೌರವ ತಂದುಕೋಡುತ್ತದೆ, ಇದಕ್ಕೆ ಕಾರಣರಾದ ತಂದೆ ತಾಯಿಗಳು ಮತ್ತು ಗುರುಗಳನ್ನು ಗೌರವದಿಂದ ಕಾಣಬೇಕಿದೆ, ಅವರ ಪರಿಶ್ರಮದ ಫಲವೇ ನಾವಾಗಿರುತ್ತೆವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸೋತಾಗ ಅದರಿಂದ ಕಲಿಬೇಕು, ಸೋಲು ಗೆಲ್ಲುವ ದಾರಿಯನ್ನು ತೋರಿಸುತ್ತದೆ ನಾವು ಗೆದ್ದೆ ಗೆಲ್ಲುತ್ತವೆ ಎಂಬ ಆತ್ಮ ವಿಶ್ವಾಸ ಸದಾಕಾಲ ನಮ್ಮಲ್ಲಿರಬೇಕು, ತಂದೆ ತಾಯಿಯೆ ಮತ್ತು ಗುರುಗಳಿಗೆ ಗೌರವ ಕೋಡುವುದೇ ಶಿಕ್ಷಣವಂತರ ಲಕ್ಷಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಅವರು ಮಾತನಾಡಿ, ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯಕ್ಕೆ ತನ್ನದೆಯಾದ ಇತಿಹಾಸವಿದೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆ ಜೊತೆಗೆ ಬದುಕಿನ ಮಾರ್ಗದರ್ಶನ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ವೇದಿಕೆ ಮೇಲೆ ಐಕ್ಯೂಎಸ್ ಸಂಯೋಜಕರಾದ ಜಿ.ಎಮ್.ನಾವದಗಿ, ಕನ್ನಡ ವಿಭಾಗ ಮುಖ್ಯಶ್ಥರು ಡಾ.ಎಮ್.ನಂಜುಂಡಸ್ವಾಮಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪಿ.ಎನ್.ರಾಠೋಡ, ಕಾರ್ಯಕ್ರಮ ಸಂಯೋಜಕ ಡಾ.ಎಮ್.ಎಮ್. ಹುದ್ದಾರ, ವಿದ್ಯಾರ್ಥಿಗಳ ಕಾರ್ಯದರ್ಶಿ ಶೀತಲ್ ಜಪಗಲ್ ಇದ್ದರು.
ಕಾರ್ಯಕ್ರಮಕ್ಕೂ ಮುಂಚೆ ಕಾಲೇಜು ಆವರಣದಲ್ಲಿ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರು ಬಸವ ಸೂಳಿಬಾವಿಯವರು ಫ್ರೆಶ್ಟೋಪಿಯಾ 2024ರ ಬ್ಯಾನರನ್ನು ಅನಾವರಣಗೊಳಿಸಿದರು, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಸ್ವಾಗತ ಕೋರಲಾಯಿತು, ನಂತರದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.