ಪರಂಪರಾ ಪಾದಯಾತ್ರೆಗೆ ಚಾಲನೆ ಇಂದು

21 ydg 03
Published on

ಯಾದಗಿರಿ: ಸಿದ್ಧಿ ಪುರುಷ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿAದ ಮುಕ್ತಿ ಕ್ಷೇತ್ರ ಅಬ್ಬೆತುಮಕೂರವರೆಗೆ ಶ್ರೀಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಮೂರು ದಿನಗಳ ಪರಂಪರಾ ಪಾದಯಾತ್ರೆ ಮಂಗಳವಾರದಿAದ ಆರಂಭಗೊಳ್ಳಲಿದೆ ಎಂದು ಮಠದ ವಕ್ತಾರ ಡಾ.ಸುಭಾಶಚಂದ್ರ ಕೌಲಗಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ ೬೫ನೇ ಜಗದ್ಗುರು ಬನ್ನಿಬಸವೇಶ್ವರರ ಗದ್ದುಗೆಗೆ ಮಹಾಪೂಜೆ ನೆರವೇರಿಸಲಾಗುವುದು. ನಂತರ ಮಧ್ಯಾಹ್ನ ೧ಕ್ಕೆ ಸಕಲ ಮಂಗಲವಾದ್ಯಗಳೊAದಿಗೆ ಅಮೃತೇಶ್ವರ ಮಂದಿರದಿAದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಪಾದಯಾತ್ರೆಗೆ ಚಾಲನೆ ದೊರೆಯಲಿದೆ ಎಂದರು.

ಮುAದೆ ಹೊರಡುವ ಪಾದಯಾತ್ರೆ ಗ್ರಾಮದ ಸೀಮಾಂತರದಲ್ಲಿ ಗ್ರಾಮದ ಚನ್ನಪ್ಪ ಸಾಹು ಬಿರೆದಾರ ಇವರ ಹೊಲದಲ್ಲಿ ನಿರ್ಮಿಸಿದ ಗುರುಮಂಟಪದಲ್ಲಿ ಶ್ರೀಗಳ ಪಾದಪೂಜೆ ನೆರವೇರುವುದು. ಅಣಬಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಭಕ್ತರು, ಭಕ್ತಿಯಿಂದ ಬರಮಾಡಿಕೊಂಡು ಶ್ರೀಗಳ ಪಾದಪೂಜೆ ಮಾಡಲಿದ್ದಾರೆ. ವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದ ಮುಗಿಸಿ ಮುಂದೆ ಸಾಗುವ ಪಾದಯಾತ್ರೆ ಸಿರವಾಳ ಗ್ರಾಮ ತಲುಪಿದ ಮೇಲೆ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ನೇತೃತ್ವದಲ್ಲಿ ಸಾಯಿಬಣ್ಣ ಶರಣರ ಹೊಲದಲ್ಲಿ ಪ್ರಸಾದ ಜರುಗುವುದು.

ಅಲ್ಲಿಂದ ಹೊರಟ ಪಾದಯಾತ್ರೆ ಹುರಸಗುಂಡಗಿ ಮುಖಾಂತರ ಅಲ್ಲಿನ ಭಕ್ತರ ಸೇವೆ ಸ್ವೀಕರಿಸಿ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನವನ್ನು ತಲುಪುವರು. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಹೂಡಲಿದ್ದಾರೆ ಎಂದರು.

ಸೋಮವಾರ ಸಂಜೆ ಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ವಿಶ್ವಾರಾಧ್ಯರ, ಭಗುಳಾಂಬಿಕಾ ದೇವಿ ಮತ್ತು ಗೋಮಾತೆ ಪೂಜೆ ನೆರವೇರಿಸಿ ಪರಂಪರಾ ಪಾದಯಾತ್ರೆಗಾಗಿ ಗಂವ್ಹಾರ ಕ್ಷೇತ್ರಕ್ಕೆ ಪ್ರಯಾಣನ ಬೆಳೆಸಿದರು. ಮಠದ ಕಿರಿಯ ಸ್ವಾಮೀಜಿ ಶ್ರೀ ಶಿವಶೇಖರ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net