ಪಯ್ಯವೂರ್ ಹಬ್ಬ ಹಿನ್ನೆಲೆ ದೇವಸ್ಥಾನ ತಲುಪಿದ ಭಕ್ತರು

12 gkp 01
Published on

ಗೋಣಿಕೊಪ್ಪ: ಎತ್ತ್ ಪೋರಾಟದೊಂದಿಗೆ ಪಯ್ಯವೂರ್ ಸ್ಥಾನಕ್ಕೆ ತೆರಳಿದ ಕೊಡಗಿನ ಭಕ್ತರು ಭಾನುವಾರ ದೇವಸ್ಥಾನವನ್ನು ತಲುಪಿದರು.


ಪಯ್ಯವೂರ್ ಈಶ್ವರನ ಹಬ್ಬದ ಆಚರಣೆಯ ನೈವೇದ್ಯಕ್ಕೆ ಅಕ್ಕಿ ಚೀಲವನ್ನು ಎತ್ತುಗಳ ಮೇಲೆ ಹೊರಿಸಿ ಕಾಲ್ನಡಿಗೆಯಲ್ಲಿ ತೆರಳಿದ ಚೆಯ್ಯಂಡಾಣೆ ಗ್ರಾಮದ ಮುಂಡಿಯೋಳಂಡ ಮತ್ತು ಬೊವ್ವೇರಿಯಂಡ ಕುಟುಂಬಸ್ಥರು ಭಾನುವಾರ ದೇವಸ್ಥಾನ ಪ್ರವೇಶಿಸಿದರು.


ಚೆಯ್ಯಂಡಾಣೆ ಗ್ರಾಮದಿಂದ ಅರಣ್ಯ ಮಾರ್ಗವಾಗಿ ಸುಮಾರು 60 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿದ ಇವರು, ಆಚರಣೆಯಂತೆ ಎತ್ತುಗಳ ಮೂಲಕ ಅಕ್ಕಿಯನ್ನು ಸಾಗಿಸಿದರು. 16 ಕೆ.ಜಿ ಅಕ್ಕಿ ಪಯ್ಯವೂರ್ ಹಬ್ಬಕ್ಕೆ ತಲುಪಿಸುವ ಪದ್ಧತಿಯನ್ನು ನಡೆಸಿಕೊಡಲಾಯಿತು. ಸುಮಾರು 20 ಭಕ್ತರು ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.

ಫೋಟೋ 12 ಜಿಕೆಪಿ 01 ; ಎತ್ತ್‌ಪೋರಾಟದ ಮೂಲಕ ಪಯ್ಯವೂರ್ ಸ್ಥಾನ ತಲುಪಿದ ಭಕ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net