ಪಪ್ಪಾಯಿ ಖರೀದಿಸಿ, ಸಾಲ ಮುಕ್ತರನ್ನಾಗಿಸಿ

DSC_9211
Published on

ವಾದಿರಾಜ ವ್ಯಾಸಮುದ್ರ ಕಲಬುರಗಿ: ನನ್ನ ತೋಟದಲ್ಲಿ ಬೆಳೆದಿರುವ ಪಪ್ಪಾಯಿ ಖರೀದಿಸುವ ಮೂಲಕ ನನ್ನನ್ನು ಸಾಲ ಮುಕ್ತನನ್ನಾಗಿ ಮಾಡಿರಿ. ಜಿಲ್ಲಾ ತೋಟಗಾರಿಕೆ ಇಲಾಖೆಗೆ ಈ ರೀತಿ ಮನವಿ ಮಾಡಿದವರು ಕಾಳಗಿ ತಾಲೂಕಿನ ರಾಜಾಪುರ ಗ್ರಾಮದ ಪಪ್ಪಾಯಿ ಬೆಳೆಗಾರ ಜಗದೀಶ ಪಾಟೀಲ್.
ಇವರು 15 ಎಕರೆಯಲ್ಲಿ ಪಪ್ಪಾಯಿ ಬೆಳೆದಿದ್ದು ರುಚಿ ರುಚಿಯಾದ ಪಪ್ಪಾಯಿಗೆ ಖರೀದಿದಾರರೇ ಇಲ್ಲದಂತಾಗಿದ್ದು ಇದು ಬೆಳೆಗಾರರಿಗೆ ಕಹಿಯಾಗಿಬಿಟ್ಟಿದೆ. ಇನ್ನೂ ಸ್ವಲ್ಪ ದಿನ ಹಾಗೇ ಹೋದರೆ ಈ ಹಣ್ಣುಗಳು ಕೊಳೆಯುವ ಆತಂಕವೂ ಇದೆ.
ಕರೊನಾ ಎಂಬ ಹೆಮ್ಮಾರಿ ರೈತರನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಒಂದೆಡೆ ರೋಗ ತಡೆಗಟ್ಟುವ ಪ್ರಯತ್ನದಲ್ಲಿರುವ ಸರ್ಕಾರ ಇನ್ನೊಂದೆಡೆ ಬಡವರಿಗೆ ಉಚಿತವಾಗಿ ಹಾಲನ್ನು ವಿತರಿಸುತ್ತಿದೆ. ಅದರಂತೆ ತೋಟಗಾರಿಕೆ ಇಲಾಖೆಯವರು ನೇರವಾಗಿ ಎಲ್ಲ ಹಣ್ಣುಗಳನ್ನು ಖರೀದಿಸುವ ಮೂಲಕ ರೈತರನ್ನು ರಕ್ಷಿಸಲು ಮುಂದಾಗಬೇಕು ಎಂಬ ಮನವಿ ಪಾಟೀಲ್ ಸೇರಿ ಅನೇಕ ರೈತರದ್ದಾಗಿದೆ.
ಸಾಲ ಮಾಡಿ ಮತ್ತು 20 ಲಕ್ಷ ರೂ. ಖಚರ್ು ಮಾಡಿ ಪಪ್ಪಾಯಿ ಬೆಳೆದಿದ್ದಾರೆ. ಲಾಭದ ಮಾತಿರಲಿ, ಖಚರ್ು ಮಾಡಿದ ಹಣ ಬಂದರೆ ಸಾಕು ಎನ್ನುತ್ತಾರೆ ಪಾಟೀಲ್.
ರೈತರು ಬೆಳೆದ ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯವರೇ ಖರೀದಿ ಮಾಡಿ ನಂತರ ಅವರೇ ನೇರವಾಗಿ ಜನತೆಗೆ ಮುಟ್ಟಿಸಬೇಕು. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಕೊಂಡು ರೈತರನ್ನು ಉಳಿಸಬೇಕೆಂದು ಜಗದೀಶ ಪಾಟೀಲ್ ಚಿಂಚೊಳ್ಳಿ ಶಾಸಕ ಡಾ. ಅವಿನಾಶ ಜಾಧವ್ ಅವರಿಗೆ ಮನವಿ ಮಾಡಿದ್ದಾರೆ. ರೈತರ ಮನವಿಯನ್ನು ಸಕರ್ಾರದ ಗಮನಕ್ಕೆ ತರುತ್ತೇನೆ ಎನ್ನುವ ಭರವಸೆ ಶಾಸಕರು ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಹಣ್ಣು ಬೆಳೆಗಾರರು ಸಾಕಷ್ಟು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈಗಾಗಲೇ ದಿಕ್ಕು ಕಾಣದೇ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆ ದಾರಿಯಲ್ಲ ಎನ್ನುವುದನ್ನು ಪ್ರತಿಯೊಬ್ಬ ರೈತರು ತಿಳಿದು ಧೈರ್ಯದಿಂದ ಮುನ್ನುಗ್ಗುವುದು ಅಗತ್ಯವಾಗಿದೆ.

ತಾವು ಬೆಳೆದ ಹಣ್ಣುಗಳನ್ನು ತೋಟಗಾರಿಕೆ ಇಲಾಖೆಯವರು ನೇರವಾಗಿ ಖರೀದಿಸಲು ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ರೈತರು ಮನವಿ ನೀಡಿದ್ದಾರೆ. ನಾನು ಸಹ ರಾಜ್ಯದ ತೋಟಗಾರಿಕೆ ಸಚಿವರಿಗೆ, ಜಿಲ್ಲಾಧಿಕಾರಿ ಮತ್ತು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದು ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮ ಕೈಕೊಳ್ಳುವಂತೆ ಪತ್ರ ಬರೆದಿದ್ದೇನೆ.
-ಡಾ. ಅವಿನಾಶ ಜಾಧವ್, ಶಾಸಕ ಚಿಂಚೊಳ್ಳಿ

ಸರ್ಕಾರವೇ ನೇರವಾಗಿ ತಮ್ಮ ವಸ್ತುಗಳನ್ನು ಖರೀದಿ ಮಾಡಬೇಕು. ಇಲ್ಲವೇ ಈ ವಸ್ತುಗಳಿಗೂ ಬೆಂಬಲ ಬೆಲೆ ಘೋಷಿಸಬೇಕೆಂದು ಹಣ್ಣು ಮತ್ತು ತರಕಾರಿ ಬೆಳೆಗಾರರು ಸಕರ್ಾರಕ್ಕೆ ಮನವಿ ಮಾಡಿದ್ದಾರೆ. ಇದು ಒಬ್ಬರೇ ತೆಗೆದುಕೊಳ್ಳುವ ನಿಧರ್ಾರವಲ್ಲ. ಬದಲಿಗೆ ನಾಲ್ಕಾರು ಇಲಾಖೆಗಳವರು ಸೇರಿ ನಿರ್ಧರಿಸಬೇಕು. ಈ ನಿಟ್ಟಿನಲ್ಲಿ ಶೀಘ್ರವೇ ಸಭೆ ಸೇರಿ ನಿರ್ಧರಿಸುತ್ತೇವೆ. ಎಚ್.ಟಿ. ಸೋಮಶೇಖರ
ಸಹಕಾರ ಸಚಿವ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net