ಪಪಂದಿಂದ ವೈಕುಂಠ ರಥ, ಜೆಸಿಬಿ ಖರೀದಿ

27BRG2
Published on

ಬೊರಗಾಂವ: ರಾಜಕೀಯವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಿ, ಉಳಿದ ಸಮಯವನ್ನು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಿ ಎಂದು ದಿ.ರಾವಸಾಹೇಬ ಪಾಟೀಲರು ತಿಳಿಸಿದ್ದರು ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.

ಪಟ್ಟಣ ಪಂಚಾಯಿತಿಯ ೧೫ನೇ ಹಣಕಾಸು ಆಯೋಗದಿಂದ ಮಂಜೂರಾದ ವೈಕುಂಠ ರಥ ಮತ್ತು ಜೆಸಿಬಿ ಯಂತ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಬಡ ಜನರ ಅನುಕೂಲದ ದೃಷ್ಟಿಯಿಂದ ಪಂಚಾಯಿತಿ ವತಿಯಿಂದ ವೈಕುಂಠ ರಥವನ್ನು ಖರೀದಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ೫ ಕೋಟಿ ರೂ. ಅನುದಾನದಲ್ಲಿ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದರು.

ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಸವಾಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಸದಸ್ಯರಾದ ಅಭಯಕುಮಾರ ಮಗದುಮ್ಮ, ಮಾಣಿಕ ಕುಂಬಾರ, ತುಳಸಿದಾಸ ವಸವಾಡೆ, ಜಾವೇದ್ ಮಕಾಂದಾರ, ಶೋಭಾ ಹಾವಲೆ, ದಿಗಂಬರ ಕಾಂಬಳೆ, ವರ್ಷಾ ಮನಗುತ್ತೆ, ಅಶ್ವಿನಿ ಪವಾರ, ಸುವರ್ಣ ಸೋಬಾನೆ, ಗಿರಿಜಾ ವಠಾರೆ, ರೋಹಿತ್ ಮಾನೆ, ರುಕ್ಸಾನಾ ಅಪರಾಜ, ಅಣ್ಣಪ್ಪ ಢೋಂಗೆ, ರಾಜು ಅಪರಾಜ, ಪ್ರಮೋದ ಜಂಗಟೆ, ಫಾರೂಕ್ ಮುಜಾವರ, ಇಂದ್ರಜಿತ್ ಪವಾರ, ಎಂ.ಬಿ.ಬೃಂಗಿಮಠ, ಅಮರ ಶಿಂಗೆ, ಅರ್ಚನಾ ಥೋರಾತ, ಕವಿತಾ ಮಾಲುಂಗೆ, ಮೇಘಾ ಡಕರೆ, ಜ್ಯೋತಿ ಮಾಲುಂಗೆ, ಭಾರತಿ ಗಿರಿಬುವಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net