ಪದ್ಮಾವತಿ ವೀರೇಶ್ ದ್ಯಾವನಹಳ್ಳಿ ಗ್ರಾಪಂ ಉಪಾಧ್ಯಕ್ಷೆ

11sor1
ದ್ಯಾವನಹಳ್ಳಿ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಕಾಂಗ್ರೆಸ್, ಬಿಜೆಪಿ ಪ್ರಮುಖರು ಸನ್ಮಾನಿಸಿದರು. ಪಾಣಿ ರಾಜಪ್ಪ, ಎ.ಎಲ್.ಅರವಿಂದ್, ಅಮಿತ್ ಗೌಡ, ರಾಜು ದ್ಯಾವನಹಳ್ಳಿ, ಹುಚ್ಚರಾಯಪ್ಪ, ಗಣಪತಿ ಇತರರಿದ್ದರು.
Published on

ಸೊರಬ: ತಾಲೂಕಿನ ಕುಪ್ಪಗಡ್ಡೆ ಹೋಬಳಿಯ ದ್ಯಾವನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ದಿನೇಶ್ ಸಂಪಗೋಡು ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪದ್ಮಾವತಿ ವೀರೇಶ್ ದ್ಯಾವನಹಳ್ಳಿ ಅವಿರೋಧವಾಗಿ ಆಯ್ಕೆಯಾದರು.

12 ಸದಸ್ಯರ ಬಲವುಳ್ಳ ಪಂಚಾಯಿತಿಯಲ್ಲಿ 9 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮೂವರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಸಹಾಯಕ ತೋಟಗಾರಿಕಾ ಅಧಿಕಾರಿ ಗುರುಕೋಟ್ಯಾಳ ಕಾರ್ಯನಿರ್ವಹಿಸಿದರು. ಪಿಡಿಒ ಈಶ್ವರ ಕಾಖಂಡಿಕೆ ಹಾಗೂ ಕಾರ್ಯದರ್ಶಿ ರಾಜಶೇಖರ್ ಸಹಕರಿಸಿದರು.

ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿದರೆ, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಡೆ ಗ್ರಾಪಂ ಅಧ್ಯಕ್ಷ ಅಮಿತ್‌ಗೌಡ, ಎಪಿಎಂಸಿ ಮಾಜಿ ಸದಸ್ಯ ರಾಜುಗೌಡ ತುಂಬ್ರಿಕೊಪ್ಪ, ಅಭಿಷೇಕ್, ಮಂಜುನಾಥ, ಮಂಜು ಜಡ್ಡಿಹಳ್ಳಿ, ಮಹೇಶ್, ಅಣ್ಣಪ್ಪ, ರಾಜು ದ್ಯಾವನಹಳ್ಳಿ, ದೇವರಾಜ್. ಎ.ಎಲ್.ಅರವಿಂದ್, ಪಾಣಿ ರಾಜಪ್ಪ, ಗಜಾನನ ರಾವ್, ರಮೇಶಪ್ಪ, ನಿರಂಜನ್, ಹಾಲಪ್ಪ, ವೀರೇಂದ್ರ ಪಾಟೀಲ್, ಕಾಂಗ್ರೆಸ್ ಪ್ರಮುಖರಾದ ಒ.ಬಿ.ರಾಜಶೇಖರ ಕೆರೆಕೊಪ್ಪ, ಗಣಪತಿ ಕುಳಗ, ಮೋಹನ್ ಜಡ್ಡಿಹಳ್ಳಿ, ಎಂ.ಡಿ.ವೀರೇಶ್, ರೇಣುಕಮ್ಮ ಭೋಜರಾಜ್, ಹುಚ್ಚರಾಯಪ್ಪ, ಕೆಂಚಪ್ಪ ಇತರರಿದ್ದರು.

ಕರಿಬಸಮ್ಮಗೆ ತಲಗಡ್ಡೆ ನೇತೃತ್ವ
ಜಡೆ ಹೋಬಳಿಯ ತಲಗಡ್ಡೆ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕರಿಬಸಮ್ಮ, ಉಪಾಧ್ಯಕ್ಷರಾಗಿ ಸೈಫುಲ್ಲಾ ಅವಿರೋಧವಾಗಿ ಆಯ್ಕೆಯಾದರು. 12 ಸದಸ್ಯ ಬಲದ ಪಂಚಾಯಿತಿಯಲ್ಲಿ ಎಲ್ಲ ಸದಸ್ಯರು ಹಾಜರಿದ್ದರು. ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ಅಧಿಕಾರಿ ಧನಂಜಯ್ ಕಾರ್ಯನಿರ್ವಹಿಸಿದರು. ಪಿಡಿಒ ಶಿವರಾಜ್, ಕಾರ್ಯದರ್ಶಿ ಪರಶುರಾಮ್ ಸಹಕರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಾಜಿ ಅಧ್ಯಕ್ಷ ಆರ್.ಟಿ.ಮಂಜುನಾಥ. ಸದಸ್ಯರಾದ ರಾಜು ಗೌಡ, ಚಂದ್ರಶೇಖರ, ಶಿವಶಂಕರ, ರಾಮಪ್ಪ, ಸುನೀತಾ, ರೂಪಾ, ಹೇಮಾವತಿ, ಚೈತ್ರಾ, ಷಜಾದ್, ಮುಖಂಡರಾದ ಮೋಹನ ಗೌಡ, ಭದ್ರಪ್ಪ, ರಾಜು, ನಾಸೀರ್, ಶಿವಾಜಿ, ಶ್ಯಾಮನ ಗೌಡ, ಪ್ರಕಾಶ್, ರಾಜಶೇಖರ್, ನಜೀರ್ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net