

ಬೆಳಗಾವಿ: ನಗರದ ವಿವಿಧೆಡೆಯಿರುವ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ನಾಥಾಜಿರಾವ ಹಲಗೇಕರ್ ಅವರ ಪತ್ನಿ ಪದ್ಮಜಾದೇವಿ ಹಲಗೇಕರ್ ಅವರು ನಿಧನರಾಗಿದ್ದಾರೆ. ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಹಲಗೇಕರ್ ಅವರ ತಾಯಿ, ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿ.ನಾಥಾಜಿರಾವ್ ಹಲಗೇಕರ್ ಅವರ ಪತ್ನಿ ಪದ್ಮಜಾದೇವಿ ಹಲಗೇಕರ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಆವರಣಕ್ಕೆ ತೆರಳಿ, ಪಾರ್ಥಿವ ಶರೀರದ ಅಂತಿಮದರ್ಶನ ಪಡೆದು ಪೂಜೆ ಸಲ್ಲಿಸಿ, ರಾಜಶ್ರೀ ಹಲಗೇಕರ್ ಅವರಿಗೆ ಸಾಂತ್ವನ ಹೇಳಿ, ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರ ಅತ್ತೆಯಾಗಿದ್ದಾರೆ. ಪದ್ಮಜಾದೇವಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಬೆಳಗಾವಿ ಅನೇಕ ಗಣ್ಯರು ಭಗವಂತ ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಹಲಗೇಕರ್ ಬಂಧು- ಬಳಗದವರಿಗೆ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.