

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಗಾಯಕ- ವಾದಕರು ವಿವಿಧ ಗ್ರಂಥಗಳನ್ನು ಹೊರತರುತ್ತಿರುವುದು ಸಂತೋಷದ ವಿಷಯ ಎಂದು ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ ಹೇಳಿದರು.
ನಗರದ ಸೃಜನಾ ರಂಗಮAದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿತ ರೋಹಿಣಿ ನಾಗೇಂದ್ರ ರಚಿತ ಗಾನರಾಗ ರಸಾಯನ' ಪುಸ್ತಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಶ್ರೋತೃಗಳ ಚಪ್ಪಾಳೆಗಳಿಂದ ಕಲಾವಿದ ಬೀಗುತ್ತ ಸಾಗಿ ಓದುವಿಕೆಯಿಂದ ವಿಮುಖನಾಗುತ್ತಾನೆ. ಆದರೆ, ಶಾಸ್ತç ಜ್ಞಾನದ ಕೊರತೆ ಮುಂದೊAದು ದಿನ ಕಾಡುತ್ತದೆ ಎಂದರು. ಸAಗೀತ ಸಂಪನ್ಮೂಲ ವ್ಯಕ್ತಿ ಪಂ. ಕೃಷ್ಣರಾವ ಇನಾಮದಾರ ಮಾತನಾಡಿ, ಮಹಾಸಾಧಕರನ್ನು ನೀಡಿದ ಧಾರವಾಡದಂತಹ ಕರ್ಮಭೂಮಿಯಲ್ಲಿ ಯುವ ಗಾಯಕರ ಕರ್ತವ್ಯ ಬಹಳಷ್ಟಿದೆ ಎಂದರು. ಕಲಾಶ್ರೀ' ಪ್ರಶಸ್ತಿ ಸ್ವೀಕರಿಸಿದ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಮಾತನಾಡಿ, ಪ್ರಶಸ್ತಿಗಳು ಆಲಸ್ಯವನ್ನು ದೂರವಿಟ್ಟು ಕ್ರಿಯಾಶೀಲರಾಗಬೇಕು ಎಂದು ಎಚ್ಚರಿಸುತ್ತವೆ ಎಂದರು.
ಶಾAತಮ್ಮ ಚಂದ್ರಶೇಖರ ಪುರಾಣಿಕಮಠ, ಪ್ರಕಾಶ ಬಾಳಿಕಾಯಿ, ರವೀಂದ್ರ ಕವಠೇಕರ, ರಾಮಚಂದ್ರ ಭಟ್ಟ, ಇತರರಿದ್ದರು.
ಸಂಗೀತ ವಿಮರ್ಶಕಿ ರೇಖಾ ಹೆಗಡೆ `ಗಾನರಾಗ ರಸಾಯನ' ಪುಸ್ತಕ ಪರಿಚಯಿಸಿದರು. ಡಾ. ಕೆ. ಗಣಪತಿ ಭಟ್ಟ ಪರಿಚಯಿಸಿದರು. ರೋಹಿಣಿ ಸ್ವಾಗತಿಸಿದರು. ಅಮೃತಾ ಪುರಾಣಿಕ ನಿರೂಪಿಸಿದರು. ಗುರುಕೃಪಾ ಸಂಗೀತ ವಿದ್ಯಾಲಯದ ಅಧ್ಯಕ್ಷ ಕುಮಾರ ಪುರಾಣಿಕಮಠ ವಂದಿಸಿದರು.
ಕೋಲ್ಕತ್ತಾದ ಪಂ. ಸಂದೀಪ ಚಟರ್ಜಿ ಸಂತೂರ ವಾದನ, ಶ್ರೀಪಾದ ಹೆಗಡೆ ಗಾಯನ ಮತ್ತು ರೋಹಿಣಿ ವಯೋಲಿನ್ ವಯೋಲಿನ್ ಪ್ರಸ್ತುತಪಡಿಸಿದರು.