ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

DHARMASTALA
Published on

ಕೆ.ಆರ್.ಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ವತಿಯಿಂದ ಕಸಬಾ ವಲಯದ ಮಡುವಿನಕೋಡಿ ಕಾರ್ಯಕ್ಷೇತ್ರದಲ್ಲಿ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಯೋಜನೆ ಜಿಲ್ಲಾ ನಿರ್ದೇಶಕ ಯೋಗೇಶ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶಗಳು, ಕಾರ್ಯಕ್ರಮಗಳು, ಸಮುದಾಯ ಅಭಿವೃದ್ಧಿ, ಸ್ವಸಹಾಯ ಸಂಘಗಳ ಪಾತ್ರ, ಕೃಷಿ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರಗತಿ ನಿಧಿ, ಜನ ಜಾಗೃತಿ, ನಮ್ಮೂರು ನಮ್ಮ ಕೆರೆ, ಜ್ಞಾನದೀಪ ಶಾಲಾ ಶಿಕ್ಷಣ, ಸುಜ್ಞಾನ ನಿಧಿ, ಶಿಷ್ಯವೇತನ ಯೋಜನೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಮೊದಲಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಯೋಜನಾಧಿಕಾರಿ ಪ್ರಸಾದ್ ಅವರು, ಪ್ರಗತಿ ರಕ್ಷಾ ಕವಚ, ಬಡ್ಡಿದರ, ವಾರದ ಸಭೆ, ಒಕ್ಕೂಟ ಸಭೆ, ಮರುಪಾವತಿ ಚೀಟಿ ಅನುಷ್ಠಾನ, ಆರೋಗ್ಯ ರಕ್ಷಾ ಹಾಗೂ ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ಗುಣಶ್ರೀ, ಸೇವಾ ಪ್ರತಿನಿಧಿಗಳಾದ ಅನಿತಾ, ಉಮಾ, ಶ್ವೇತಾ, ನೇತ್ರಾವತಿ, ಶಶಿಕಲಾ, ಸುನೀತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net