ಗೋಕಾಕ: ಇಲ್ಲಿನ ರೋಟರಿ ಸಂಸ್ಥೆ ಹಾಗೂ ಇನ್ನರ್ವ್ಹೀಲ್ 2024&25ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.14ರಂದು ಬೆಳಗ್ಗೆ 10 ಗಂಟೆಗೆ ನಗರದ ಡಾ.ಬಿ.ಸಿ.ಆಜರೆ ಮೆಮೊರಿಯಲ್ ರೋಟರಿ ರಕ್ತ ಭಂಡಾರ ಸಭಾಭವನದಲ್ಲಿ ಜರುಗಲಿದೆ.
ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ಸಿದ್ದಣ್ಣ ಕಮತ, ಕಾರ್ಯದರ್ಶಿಯಾಗಿ ರಾಜಶೇಖರ ಮುನ್ನವಳ್ಳಿಮಠ, ಖಜಾಂಚಿಯಾಗಿ ಸತೀಶ ಜಾಧವ ಹಾಗೂ ಇನ್ನರ್ವ್ಹೀಲ್ ಸಂಸ್ಥೆ ಅಧ್ಯಕ್ಷರಾಗಿ ಜಯಶ್ರೀ ಕಮತ, ಕಾರ್ಯದರ್ಶಿಯಾಗಿ ಅನುಪಾ ಕೌಶಿಕ, ಖಜಾಂಚಿಯಾಗಿ ಗಿರಿಜಾ ಮುನ್ನವಳ್ಳಿಮಠ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ೂಡಗೇರಿಯ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ರೋಟರಿ ಮಾಜಿ ಪ್ರಾಂತಪಾಲ ಅವಿನಾಶ ಪೋತದಾರ, ಬೆಳಗಾವಿ ಇನ್ನರ್ವ್ಹೀಲ್ ಸಂಸ್ಥೆ ಮಾಜಿ ಅಧ್ಯೆ ರೂಪಾ ಪೋತದಾರ, ಸಹಾಯಕ ಪ್ರಾಂತಪಾಲ ಮಹೇಶ ಬೆಲ್ಲದ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಲಯನ್ಸ್ ಸಂಸ್ಥೆ ಸಮಾರಂಭ: ಗೋಕಾಕ ನಗರದ ಲಯನ್ಸ್ ಸಂಸ್ಥೆಯ 2024&25ರ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭವು ಜು.14ರಂದು ಸಂಜೆ 6 ಗಂಟೆಗೆ ನಗರದ ಸಮುದಾಯ ಭವನದಲ್ಲಿ ಜರುಗಲಿದೆ. ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಶೋಕ ಲಗಮಪ್ಪಗೋಳ, ಕಾರ್ಯದರ್ಶಿಯಾಗಿ ಸುರೇಶ ಶಿಂಧಿಹಟ್ಟಿ, ಖಜಾಂಚಿಯಾಗಿ ಪ್ರಶಾಂತ ಅಂಕದವರ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ಲಯನ್ಸ್ ಸಂಸ್ಥೆಯ ಭಾರತಿ ವಾಡವಿ ಹಾಗೂ ಬಿ.ಬಿ.ನಂದ್ಯಾಲ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಡಾ.ಅಶೋಕ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.