ಪದಾಧಿಕಾರಿಗಳ ಪದಗ್ರಹಣ ನಾಳೆ

Published on

ಚಾಮರಾಜನಗರ: ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಜ.1ರಂದು ಭೀಮ ಕೋರೆಗಾವ್ ವಿಜಯೋತ್ಸವ ಹಾಗೂ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿದೆ.

ನಗರದ ರೋಟರಿ ಭವನದಲ್ಲಿ ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮವನ್ನು ಸಾಹಿತಿ ಡಾ. ವಡ್ಡಗೆರೆ ನಾಗರಾಜಯ್ಯ ಉದ್ಘಾಟಿಸಲಿದ್ದಾರೆ. ಕವಿ ಮಹದೇವ ಶಂಕನಪುರ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಅಧ್ಯಕ್ಷ ಎಲ್.ನಾಗರಾಜು, ದಸಾಪ ವಿಭಾಗೀಯ ಸಂಯೋಜಕ ಡಾ. ಚಂದ್ರಗುಪ್ತ ಪದಾಧಿಕಾರಿಗಳಿಗೆ ನೇಮಕ ಆದೇಶ ಪತ್ರ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net