

ಚಿಕ್ಕಮಗಳೂರು: ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಸಿ.ಲೋಕಪ್ಪಗೌಡ ಹಾಗೂ ಉಪಾಧ್ಯಕ್ಷರಾಗಿ ಎಚ್.ಆರ್.ಮರುಳಪ್ಪ ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ, ಸಂಘವು ೨೫ ವರ್ಷಗಳಲ್ಲಿ ಲಾಭದಾಯಕವಾಗಿ ಮತ್ತು ಸದಸ್ಯರಿಗೆ ಶೇ.೧೦ ಡಿವಿಡೆಂಟ್ ನೀಡುತ್ತಿದೆ. ಸ್ವಂತ ಕಟ್ಟಡೊಂದಿಗೆ ಪ್ರಗತಿಪಥದ ಹಾದಿಯಲ್ಲಿ ಸಾಗುತ್ತಿದ್ದು ಸಹಕರಿಸಿದ ಎಲ್ಲ ನಿರ್ದೇಶಕರು, ಮಾಜಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಹಾಗೂ ಕಟ್ಟಡವನ್ನು ನಿರ್ಮಿಸಲು ಸಹಕರಿಸಿದ ಎಲ್ಲಾ ನಿರ್ದೇಶಕರು ಹಾಗÀÆ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಯು.ಟಿ.ನಾಗರಾಜ್, ಎ.ಎನ್.ಮಹೇಶ್, ಎಂ.ಸಿ. ಶಿವಾನಂದಸ್ವಾಮಿ, ವೆಂಕಟೇಶ್ ಪೈ, ಸಿ.ಆರ್.ಪ್ರೇಮ್‌ಕಮಾರ್, ಗೋವಿಂದೇಗೌಡ, ದುಗ್ಗೇಗೌಡ, ಬಿ.ಎಚ್.ಶಂಕರ್, ಕೆ.ಬಿ.ನಂದೀಶ್, ಎಂ.ಎಸ್.ಅನAತ, ಎಂ.ಪಿ.ಗAಗೇಗೌಡ, ಜಯಶ್ರೀ ಜೋಷಿ, ವಸಂತಮ್ಮ, ವ್ಯವಸ್ಥಾಪಕ ಸಿ.ಎಂ.ನಾರಾಯಣಸ್ವಾಮಿ ಮತ್ತಿತರರಿದ್ದರು.