

ಕೊಡೇಕಲ್ : ಇದೇ ಮೊದಲ ಬಾರಿ ಕೊಡೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಪದವೀಧರ ಯುವಕ ಶಿವಶರಣಪ್ಪ ಕುಂಬಾರ ಅವಿರೋಧವಾಗಿ ಆಯ್ಕೆಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಗ್ರಾಪಂನ ೨ನೇ ಅವಧಿಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದೆ. ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿತ್ತು. ಕ್ರಮವಾಗಿ ಶಿವಶರಣಪ್ಪ ಕುಂಬಾರ ಮತ್ತು ನೀಲಮ್ಮ ದಂಡಾಗೋಳ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಜಿ.ಎಂ.ಗಾಣಗೇರ ಘೋಷಣೆ ಮಾಡಿದರು.
ಜನರು ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಂಡು ಹೋಗುವ ಮೂಲಕ ಕೊಡೇಕಲ್ ಸೇರಿ ಗ್ರಾಪಂಗೆ ಒಳಪಡುವ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಪ್ರಯತ್ನ ಮಾಡುವೆ ಎಂದು ನೂತನ ಅಧ್ಯಕ್ಷ ಶಿವಶರಣಪ್ಪ ಕುಂಬಾರ ಹೇಳಿದರು.