ಪದವೀಧರ ಮತದಾನಕ್ಕೆ ಹೆಸರು ನೋಂದಾಯಿಸಿ

01
Published on

ಸುರಪುರ : ಕ್ಷೇತ್ರದ ಪದವೀಧರರು ಮುಂಬರುವ ಈಶಾನ್ಯ ಪದವೀಧರ ಚುನಾವಣೆಯಲ್ಲಿ ಮತದಾನ ಮಾಡಲು ದಾಖಲಾತಿ ನೀಡಿ ಅರ್ಹತೆ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಕೆ. ವಿಜಯಕುಮಾರ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ಬುಧವಾರ ಕರೆದಿದ್ದ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯ ಮಾರ್ಗಸೂಚಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಪದವಿ ಪಡೆದವರು ಅರ್ಹರಾಗಿರುತ್ತಾರೆ. ೨೦೨೩ ನ.೧ಕ್ಕಿಂತ ಮೂರು ವರ್ಷಗಳ ಪೂರ್ವದಲ್ಲಿ ೨೦೨೦ ನ.೧ಕ್ಕಿಂತ ಹಿಂದೆ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವೀಧರರಾಗಿರಬೇಕು.

ಪದವೀಧರರು ನಮೂನೆ ೧೮ರ ಅರ್ಜಿ ಪಡೆದು ದ್ವಿಪ್ರತಿ ಭಾವಚಿತ್ರದೊಂದಗೆ ಕಡ್ಡಾಯವಾಗಿ ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ್ ಕಾರ್ಡ್ನ ಪ್ರತಿ, ಚುನಾವಣಾ ಗುರುತಿನ ಚೀಟಿ ಹಾಗೂ ವಾಸಿಸುತ್ತಿರುವ ವಾಸಸ್ಥಳದ ದಾಖಲೆಯನ್ನು ಅರ್ಜಿಯೊಂದಿಗೆ ನ.೬ರೊಳಗಾಗಿ ವಿಧಾನ ಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು.

ಸರ್ಕಾರಿ ನೌಕರರಾಗಿದ್ದಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿರುವ ೩ನೇ ಅನುಸೂಚಿ ನಮೂನೆಯಲ್ಲಿ ತಮ್ಮ ಕಚೇರಿ ಮುಖ್ಯಸ್ಥರ ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಪದವೀಧರರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಲೆಕ್ಕಿಗರಿಗೆ ಜಿಲ್ಲಾಧಿಕಾರಿಗಳ ಸಭೆ ನಂತರ ಸೂಚಿಸಲಾಗುವುದು ಎಂದು ತಿಳಿಸಿದರು.
ಶಾಸಕರ ಆಪ್ತ ಕರ‍್ಯದರ್ಶಿ ಹಣಮಂತ ಮಕಾಶಿ, ಮಾಜಿ ಶಾಸಕರ ಆಪ್ತ ಕರ‍್ಯದರ್ಶಿ ಈಶ್ವರ ನಾಯಕ, ಗ್ರೇಡ್-೨ ತಹಸೀಲ್ದಾರ್ ಅವಿನಾಶ, ಎಸ್‌ಡಿಎ ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net