ಪದವಿನಂಗಡಿ ಭೀಕರ ಬೈಕ್ ಅಪಘಾತ

IMG_20210507_134352
Published on

ಮಂಗಳೂರು: ನಗರದ ಪದವಿನಂಗಡಿ ಬಳಿ ಶುಕ್ರವಾರ ಬೆಳಗ್ಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಬೈಕ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೊಂದೇಲ್ ನಿವಾಸಿ ಪ್ರಶಾಂತ್ ಎಂಬವರು ಗಾಯಾಳು. ಪದವಿನಂಗಡಿ ಬಳಿ ಅಡ್ಡ ಬಂದ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಂಗಡಿಯ ಮೆಟ್ಟಿಲಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸವಾರ ಎಸೆಯಲ್ಲಟ್ಟು ಗಂಭೀರ ಗಾಯಗೊಂಡಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಇನ್ನೊಬ್ಬರು ಬೈಕ್ ಸವಾರ ಕೂಡಾ ಪಲ್ಟಿಯಾಗಿ ಬಿದ್ದು ಗಾಯಗೊಂಡಿದ್ದಾರೆ.

ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಅಪಘಾತದ ತೀವ್ರತೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net