ಪದವಿ ಬಳಿಗೆ ವಿದ್ಯಾರ್ಥಿಗಳ ಜೀವನ ಮತ್ತೊಂದು ಅಧ್ಯಾಯ ಆರಂಭ

26
Published on

ಮೈಸೂರು: ಪದವಿ ನಂತರ ವಿದ್ಯಾರ್ಥಿಗಳ ಜೀವನದ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿಯಿದ್ದಂತೆ, ಉತ್ತಮ ವ್ಯಕ್ತಿತ್ವ, ಶ್ರಮ ಮತ್ತು ಕೌಶಲ ಬೆಳೆಸಿಕೊಂಡು ಆತ್ಮವಿಶ್ವಾಸದೊಂದಿಗೆ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಟಿ.ಎನ್.ಶ್ರೀನಿವಾಸ ಸಲಹೆ ನೀಡಿದರು.
ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪದವೀಧರರ ದಿನಾಚರಣೆಯಲ್ಲಿ ಪ್ರಮಾಣ ಪತ್ರ ವಿತರಿಸಿದ್ದಲ್ಲದೆ, ವಿವಿಧ ವಿಭಾಗಗಳಲ್ಲಿ ವಿಷಯವಾರು ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ದಾನಿಗಳ ಸ್ಮರಣಾರ್ಥ ನಗದು ಪುರಸ್ಕಾರ ನೀಡಿ ಗೌರವಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಕೌಶಲವಿರುತ್ತದೆ. ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅರಿವಿರಬೇಕು, ಜೀವನದಲ್ಲಿ ಸೋಲು ಎಂಬುದನ್ನು ಅನುಭವ ಮತ್ತು ಗೆಲುವಿನ ಮೆಟ್ಟಿಲು ಎಂದು ತಿಳಿದು ಧೈರ್ಯದಿಂದ ಮುನ್ನಡೆದಾಗ ಯಶಸ್ಸನ್ನು ಕಾಣಬಹುದು ಎಂದರು.
ಬೆಂಗಳೂರಿನ ಡಿ.ಎಕ್ಸ್.ಸಿ.ಟೆಕ್ನಾಲಜಿ-ಜಿಡಿ ಇಂಡಿಯಾ ಸಂಸ್ಥೆಯ ಡೆಲಿವರಿ ಮ್ಯಾನೇಜರ್ ನಟೇಶ್ ಪಾಲಹಳ್ಳಿ ಮಾತನಾಡಿ, ಆಧುನಿಕ ತಾಂತ್ರಿಕತೆ ಅವಲಂಭಿತ ಜಗತ್ತಿನಲ್ಲಿ ವಿಪುಲ ಅವಕಾಶಗಳಿವೆ. ಆದರೆ ಅದಕ್ಕೆ ಅನುಗುಣವಾಗಿ ವ್ಯಕ್ತಿತ್ವ ಮತ್ತು ಕೌಶಲಗಳನ್ನು ಬೆಳೆಸಿಕೊಂಡರೆ ಮಾತ್ರ ಈ ಅವಕಾಶಗಳನ್ನು ಬಳಸಿಕೊಳ್ಳಬಹುದು ಎಂದರು.
ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್ ಅಧ್ಯಕ್ಷತೆ ವಹಿಸಿ, ಇಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ ಅವರು, ಕಾಲೇಜಿನ ಶೈಕ್ಷಣಿಕ ಹಾಗೂ ಇತರೆ ಚಟುವಟಿಕೆಗಳ ಸಮಗ್ರ ವರದಿ ಮಂಡಿಸಿದರು,
ಎಟಿಎಂಇ ಆಡಳಿತ ಮಂಡಳಿ ಪದಾಧಿಕಾರಿಗಳಾದ ಡಾ.ಕೆ.ಚಿದಾನಂದಗೌಡ, ಎಚ್.ವೆಂಕಟೇಶ್, ಧೀರೇಂದ್ರಕುಮಾರ್ ಆರ್.ಮೆಹ್ತಾ, ಎಸ್‌ಜೆಸಿಇ ನಿವೃತ್ತ ಪ್ರಾಂಶುಪಾಲ ಡಾ.ಸೈಯ್ಯದ್ ಶಕೀಬ್ ಉರ್ ರೆಹಮಾನ್, ಐಕ್ಯೂಎಸಿ ನಿರ್ದೇಶಕ ಡಾ.ಎಲ್.ಬಸವರಾಜ್, ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಎಂ.ಎಸ್.ಗೋವಿಂದೇಗೌಡ, ಡಾ.ಎಸ್.ಆರ್.ಭಾಗ್ಯಶ್ರೀ, ಕಾರ್ಯಕ್ರಮದ ಪ್ರಧಾನ ಸಂಯೋಜಕ ಇಇಇ ವಿಭಾಗದ ಮುಖ್ಯಸ್ಥ ಡಾ.ಎಲ್.ಪಾರ್ಥಸಾರಥಿ, ಸಹ ಪ್ರಾಧ್ಯಾಪಕರುಗಳಾದ ಮರಿಯಾಸುಷ್ಮಾ, ಡಾ.ಶಕುಂತಲಾ, ಶ್ರೀಶಯನ, ಸೌಮ್ಯಶ್ರೀ, ಎಚ್.ಸ್ವಪ್ನಾ, ಡಾ.ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net