

ಚಿತ್ರದುರ್ಗ:ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಎಸ್‌ಜೆಎಂ ದಂತ ವೈದ್ಯಕೀಯ ಮಹಾವಿದ್ಯಾಲಯ ಪದವಿ ಪ್ರಧಾನ ಸಮಾರಂಭ ಗುರುವಾರ ನಡೆಯಿತು. ಶ್ರೀಮಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು,ತುಮಕೂರು ಎಸ್‌ಎಸ್‌ಡಿಸಿ ಪ್ರಾಚಾ ರ‌್ಯ ಡಾ.ಪ್ರವೀಣ್ ಬಿ ಕುಡ್ಬಾ, ಭೂಪಾಲ್ ಆರ್‌ಸಿಡಿಎಸ್ ಪ್ರಾಚಾರ‌್ಯ ಡಾ.ಜಿ.ಎಸ್ ಚಂದು,ಎಸ್‌ಜೆಎಂ ದಂತ ವೈದ್ಯ ಮಹಾವಿದ್ಯಾಲಯದ ಪ್ರಾ ಚಾರ‌್ಯ ಡಾ.ರಘುನಾಥರೆಡ್ಡಿ ಉಪ ಪ್ರಾಚಾರ‌್ಯೆ ಡಾ.ಹರಿಣಿ ಇದ್ದರು. ಸಮಾರಂಭದಲ್ಲಿ 37 ಸ್ನಾತಕ ವಿದ್ಯಾರ್ಥಿಗಳು,ಇಬ್ಬರು ಸ್ನಾತಕೋತ್ತರ ವಿದ್ಯಾ ರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಜಯದೇವ ಪ್ರಾರ್ಥಿಸಿದರು. ಡಾ.ರಘುನಾಥ್ ರೆಡ್ಡಿ ಸ್ವಾಗತಿಸಿದರು.