ಪತ್ರಿಕೆಗಳು ಸಮಾಜದ ನ್ಯೂನತೆ ತೋರಿಸಲಿ

3..3
ಹುಕ್ಕೇರಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಹುಕ್ಕೇರಿ ತಾಲೂಕು ಘಟಕದ ನಾಮಫಲಕ ಉದ್ಘಾಟನೆ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಚಂದ್ರಶೇಖರ ಶಿವಾಚಾರ್ಯರು, ಅಭಿನವ ಮಂಜುನಾಥ ಶ್ರೀಗಳು, ರಾಮಗೌಡ ಪಾಟೀಲ, ಗಂಗಾಧರ ಶಿರಗಾವಿ ಇತರರಿದ್ದರು.
Published on

ಹುಕ್ಕೇರಿ: ಪಟ್ಟಣದ ಹೊರವಲಯದ ಕ್ಯಾರಗುಡ್ಡ ಸಮೀಪದ ಆವಜೀಕರ ಆಶ್ರಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಹುಕ್ಕೇರಿ ತಾಲೂಕು ಘಟಕದ ನಾಮಫಲಕ ಉದ್ಘಾಟನೆ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀಗಳು ನಾಮಫಲಕ ಅನಾವರಣಗೊಳಿಸಿದರು.


ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಪತ್ರಿಕೆಗಳು ಸಮಾಜ ಎದುರಿಸುತ್ತಿರುವ ನ್ಯೂನತೆಗಳನ್ನು ಎತ್ತಿ ತೋರಿಸಬೇಕು. ಸುದ್ದಿಗಳು ಮತ್ತೊಬ್ಬರನ್ನು ಹೀಯಾಳಿಸುವಂತಿರಬಾರದು. ಪತ್ರಕರ್ತರು ದೈನಂದಿನ ಜೀವನದಲ್ಲಿ ಪತ್ರಿಕಾ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷ ರಾಮಗೌಡ ಪಾಟೀಲ ಮಾತನಾಡಿದರು. ಸಂಘದ ಪದಾಕಾರಿಗಳಿಗೆ ಶ್ರೀಗಳು ಗುರುತಿನ ಕಾರ್ಡ್ ವಿತರಿಸಿದರು. ಪತ್ರಕರ್ತರನ್ನು ಹಾಗೂ ಶ್ರೀಗಳನ್ನು ಸತ್ಕರಿಸಲಾಯಿತು.

ತಾಲೂಕಾಧ್ಯಕ್ಷ ರಾಮಗೌಡ ಪಾಟೀಲ,ಗಂಗಾಧರ ಶಿರಗಾವಿ, ಪ್ರಶಾಂತ ನಾಗನೂರಿ, ಶ್ರೀಕಾಂತ ಚೌಗಲಾ, ರಾಜಶೇಖರ ನಾಯಿಕ, ಕೆಂಪಣ್ಣ ಚೌಗಲಾ, ಸಂಜೀವ ಕಟ್ಟಿಮನಿ, ಸಂತೋಷ ನಿರ್ಮಲೆ, ಬ್ರಹ್ಮಾನಂದ ಪತ್ತಾರ, ಯಮನಪ್ಪ ಗುಡಾಜ, ಕಲ್ಲಪ್ಪ ಮಾಳಾಜ, ಗುರುಸಿದ್ಧ ಮಡಿವಾಳ, ಹಿರಿಯ ಪತ್ರಕರ್ತರಾದ ಅಣ್ಣಪ್ಪ ಅಗಸರ, ಸುರೇಶ ಡಂಗಿ, ರಾಜು ಮುಗಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net