ಪತ್ರಿಕೆಗಳು ಸಮಾಜದ ಆಧಾರ ಸ್ತಂಭ

bhr press
ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ರವಿಚಂದ್ರ ಉದ್ಘಾಟಿಸಿದರು. ಎಂ.ಕೆ.ಪುಟ್ಟರಾಜು, ಸತೀಶ್ ಅರಳೀಕೊಪ್ಪ, ಒ.ಡಿ.ಸ್ಟೀಫನ್ ಇತರರಿದ್ದರು.
Published on

ಬಾಳೆಹೊನ್ನೂರು: ಪತ್ರಿಕೆಗಳು ಸಮಾಜದ ಆಧಾರಸ್ತಂಭವಾಗಿವೆ ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.

ಕಡ್ಲೇಮಕ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಎನ್.ಆರ್.ಪುರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿವೆ. ವಸ್ತುನಿಷ್ಠ ವರದಿಯಿಂದ ಜನಪ್ರತಿನಿಧಿಗಳಿಗೆ ಪತ್ರಿಕೆಯ ಬಗ್ಗೆ ಗೌರವ ಹಾಗೂ ಭಯಭಕ್ತಿ ಬರುತ್ತದೆ ಎಂದರು.

ನಿವೃತ್ತ ಉಪನ್ಯಾಸಕ ಎಂ.ಕೆ.ಪುಟ್ಟರಾಜು ಮಾತನಾಡಿ, ಚರ್ಚಾ ಸ್ಪರ್ಧೆ ಅಧ್ಯಯನ ಹಾಗೂ ಮಾತುಗಾರಿಕೆ ಬೆಳೆಸುತ್ತದೆ. ದಿನಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಪರ, ವಿರೋಧವಾಗಿ ಉತ್ತಮ ವಾದ ಮಂಡಿಸಬಹುದು. ನಿರಂತರ ಅಧ್ಯಯನದಿಂದ ಜ್ಞಾನ ವೃದ್ಧಿಯಾಗಲಿದೆ ಎಂದರು.

ಚರ್ಚಾ ಸ್ಪರ್ಧೆಯಲ್ಲಿ ಸೃಜನ್(ಪ್ರಥಮ), ಸುದರ್ಶನ್(ದ್ವಿತೀಯ) ಸ್ಥಾನ ಪಡೆದರು. ಚುಸಾಪ ಖಜಾಂಚಿ ರಾ.ವೆಂಕಟೇಶ್, ಕಜಾಪ ತಾಲೂಕು ಅಧ್ಯಕ್ಷ ಸತೀಶ್ ಅರಳೀಕೊಪ್ಪ, ಕಾರ್ಯದರ್ಶಿ ಶೇಖರ್ ಇಟ್ಟಿಗೆ, ಪತ್ರಕರ್ತರಾದ ಪ್ರವೀಣ್‌ಕುಮಾರ್, ಯಜ್ಞಪುರುಷ ಭಟ್, ಕವಯತ್ರಿ ಲತಾ, ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀಫನ್, ಉಪನ್ಯಾಸಕರಾದ ಕೆ.ಜೆ.ಮಾಲತಿ, ಮಮತಾ, ರವಿಶಂಕರ್, ಜಾವಿದ್, ಪ್ರಶಾಂತ್, ಮರಿಯಾ, ವರ್ಷಿತಾ, ಸುಮಿತಾ, ಜೆಸೆಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net