

ಕಲಬುರಗಿ: ಪ್ರಜಾಪ್ರಭುತ್ವದ ಶಾಸಕಾಂಗ, ನ್ಯಾಯಾಂಗ, ಕರ‍್ಯಾಂಗದಂತೆ ಪತ್ರಿಕಾರಂಗ ಕೂಡ ಸಮಾಜದ ಆಧಾರ ಸ್ಥಂಭವಾಗಿದೆ. ಜಗತ್ತಿನ ವಿದ್ಯಮಾನ ಅರಿಯಲು, ಸಮಾಜದ ತಪ್ಪು- ಒಪ್ಪು ಸತ್ಯ ಮತ್ತು ವಸ್ತು ನಿಷ್ಠತೆಯಿಂದ ತೋರಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ ಎಂದು ಆಕಾಶವಾಣಿ ನಿವೃತ್ತ ನರ‍್ದೇಶಕ ಡಾ.ಸದಾನಂದ ಪರ‍್ಲಾ ಹೇಳಿದರು.
ನಗರದ ರ‍್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪರ‍್ವ ವಿಜ್ಞಾನ ಮಹಾವಿದ್ಯಾಲಯ, ಜಸ್ಟಿಸ್ ಶಿವರಾಜ ವಿ.ಪಾಟೀಲ್ ಪ್ರತಿಷ್ಠಾನದಿಂದ ಮಂಗಳವಾರ ರ‍್ಪಡಿಸಿದ್ದ ವೈದ್ಯರು, ಲೆಕ್ಕಪರಿಶೋಧಕರ, ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ವಿದ್ಯರ‍್ಥಿಗಳು ತಜ್ಞ ವೈದ್ಯರು, ಸಿಎಗಳಾಗಿ ಹಾಗೂ ಇತರ ಹುದ್ದೆಗೆ ಸಮಾಜ ಸೇವೆ ಹಾಗೂ ಪಾಲಕರ ಸೇವೆ ಮಾಡುತ್ತ ಅದ್ಭುತ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. ವೈದ್ಯರು, ಪತ್ರರ‍್ತರು, ಲೆಕ್ಕ ಪರಿಶೋಧಕರು ಸಮಾಜವನ್ನು ಪ್ರಗತಿಯತ್ತ ಕರೆದೊಯ್ಯುತ್ತಾರೆ ಎಂದರು.
ರ‍್ವಜ್ಞ ಶಿಕ್ಷಣ ಸಂಸ್ಥೆ ಓದಿನೊಂದಿಗೆ ಜೀವನದ ಶಿಕ್ಷಣ ಕೊಡುತ್ತಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯರ‍್ಥಿಗಳಿಗೆ ನಾನೂ ಸಮಾಜದಲ್ಲಿ ಬದುಕಬಲ್ಲೇ ಎಂಬ ಆತ್ಮವಿಶ್ವಾಸ ಮೂಡಿಸುತ್ತದೆ. ಧರ‍್ಯ, ನೈತಿಕಮೌಲ್ಯ, ಮಾನವೀಯ ಗುಣವನ್ನು ಕಲಿಸುತ್ತಿದೆ. ಈ ರ‍್ವಜ್ಞ ಸಂಸ್ಥೆ ವಿದ್ಯರ‍್ಥಿಗಳ ರ‍್ವಾಂಗೀಣ ಅಭಿವೃದ್ಧಿಯ ಕೇಂದ್ರವಾಗಿದೆ ಎಂದು ಶ್ಲಾಘಿಸಿದರು.
ಭಾರತ ದೇಶದ ಅತಿಕಿರಿಯ ಸಿಎ ಪ್ರಶಾಂತ ಬಿಜಾಸಪುರ ಮಾತನಾಡಿ, ಒತ್ತಡದ ಬದುಕಿನಲ್ಲಿ ಯೋಗ ವ್ಯಾಯಾಮ ಮಾಡಿ ಸದೃಢತೆಯಿಂದಿರಬೇಕು. ಜೀವನದಲ್ಲಿ ಕಠಿಣ ಸಮಸ್ಯೆಗಳು ಬಂದಾಗ ಧರ‍್ಯದಿಂದ ಎದುರಿಸಬೇಕು ಎಂದರು.
ವೈದ್ಯೆ, ಕಾಲೇಜಿನ ಹಳೇ ವಿದ್ಯರ‍್ಥಿನಿ ಡಾ.ಪರ‍್ಣಿಮಾ ತಡಕಲ್ ಮಾತನಾಡಿ, ಶ್ರದ್ದೆಯಿಂದ ಓದಿದರೆ ಸಾಧನೆಗೆ ಅಡ್ಡಿ ಇಲ್ಲ. ವಿದ್ಯರ‍್ಥಿಯಾಗಿದ್ದಾಗ ರ‍್ವಜ್ಞ ಸಂಸ್ಥೆಯಲ್ಲಿನ ಪ್ರೇರಣಾದಾಯಕ ವಿಶೇಷ ಕರ‍್ಯಕ್ರಮಗಳು ನನಗೆ ಗುರಿ ತಲುಪಲು ಸಹಕಾರಿಯಾದವು ಎಂದರು.
ಮಕ್ಕಳ ನರರೋಗ ತಜ್ಞೆ ಡಾ.ಪ್ರಸಾದ ಬಿಜಾಸಪೂರ ಮಾತನಾಡಿ, ಜೀವನದಲ್ಲಿ ಗುರಿ ತಲುಪಲು ದಾರಿ ತೋರಿಸುವವರು ಶಿಕ್ಷಕರು, ಅವರ ಮರ‍್ಗರ‍್ಶನ ಪಡೆದು ಅವರು ಹೇಳುವ ವಿಷಯವನ್ನು ರ‍್ಥಮಾಡಿಕೊಂಡು ಓದಿ ಪರೀಕ್ಷೆಯಲ್ಲಿ ಏನೇ ಪ್ರಶ್ನೆ ಕೇಳಿದರು ಉತ್ತರಿಸುವ ಸಾರ‍್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚರ‍್ಯ ಪ್ರಶಾಂತ ಕುಲರ‍್ಣಿ, ವಿನುತಾ ಆರ್.ಬಿ., ಪ್ರಭುಗೌಡ ಸಿದ್ದಾರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ ಕುಲರ‍್ಣಿ ಇತರರಿದ್ದರು. ಪ್ರಿಯಾ ಗಂಗೋತ್ರಿ ಪ್ರರ‍್ಥಿಸಿದರು. ತ್ರಿವೇಣಿ ಭಾವಿ ಸ್ವಾಗತಿಸಿದರು. ಡಾ.ವಿದ್ಯಾವತಿ ಪಾಟೀಲ್ ನಿರೂಪಣೆ ಮಾಡಿದರು.