ಪತ್ರಿಕೆಗಳು ನ್ಯಾಯ ಬೆಂಬಲಿಸಲಿ

19Ainapur1
Published on

ಐನಾಪುರ: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಹಾಗೂ ಸಮಾಜದ ಅಂಕುಡೊಂಕು ತಿದ್ದುವ ಪತ್ರಿಕಾ ರಂಗದ ಕಾರ್ಯ ಶ್ಲಾಘನೀಯ ಎಂದು ಯುವ ಧುರೀಣ ಚಿದಾನಂದ ಸವದಿ ಹೇಳಿದರು.

ಪಟ್ಟಣದ ಕೆಆರ್‌ಇಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಕಾಗವಾಡದಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಅನಧಿಕೃತ ಪತ್ರಕರ್ತರನ್ನು ಪತ್ರಕರ್ತರ ಸಂಘ ನಿಯಂತ್ರಿಸಬೇಕು. ಇಲ್ಲದೆ ಹೋದಲ್ಲಿ ನಿಷ್ಠಾವಂತ ಪತ್ರಕರ್ತರಿಗೆ ಕೆಟ್ಟೆಸರು ಬರುವುದರಲ್ಲಿ ಸಂಶಯವಿಲ್ಲ ಎಂದರು.

ಸದಲಗಾ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ವೀರೇಶ ಪಾಟೀಲ ಮಾತನಾಡಿ, ಸಂವಿಧಾನಾತ್ಮಕವಾಗಿ ಪತ್ರಿಕಾ ರಂಗ ನಾಲ್ಕನೇ ಅಂಗದ ಮಹತ್ವ ಪಡೆದುಕೊಂಡಿದೆ. ಕಾಲ ಬದಲಾದಂತೆ ಪತ್ರಿಕೆಗಳ ಕಾರ್ಯ ವ್ಯಾಪ್ತಿ, ಸ್ವರೂಪ ಬದಲಾಗುತ್ತಾ ಬಂದಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕವಲಗುಡ್ಡ-ಹಣಮಾಪುರ ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಪತ್ರಕರ್ತರು ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಶಾಸಕ ರಾಜು ಕಾಗೆ ಮಾತನಾಡಿದರು. ಐನಾಪುರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಪೌರ ಕಾರ್ಮಿಕರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ ಕಾಗಲಿ, ತಹಸೀಲ್ದಾರ್ ರವೀಂದ್ರ ಹಾದಿಮನಿ, ತಾಪಂ ಅಧಿಕಾರಿ ವೀರಣ್ಣ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮಗದುಮ್, ಶಿಶು ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ಸದಲಗೆ, ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಂಜೀವ ಭಿರಡಿ, ಅರಳಿಹಟ್ಟಿ ಗ್ರಾಪಂ ಅಧ್ಯಕ್ಷ ಬಸನಗೌಡ ಪಾಟೀಲ, ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪಪಂ ಮುಖ್ಯಾಧಿಕಾರಿ ಮಹಾಂತೇಶ, ಉಪತಹಸೀಲ್ದಾರ್‌ಅಣ್ಣಾಸಾಹೇಬ ಕೋರೆ, ಕೆ.ಕೆ.ಗಾವಡೆ, ವಿಜಯ ಸವದಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಅಣ್ಣಾಸಾಹೇಬ ಪಾಟೀಲ, ಜ್ಯೋತಿಕುಮಾರ ಪಾಟೀಲ, ರಮೇಶ ಚೌಗಲಾ, ಚಿದಾನಂದ ಅವಟಿ, ದಾದಾ ಪಾಟೀಲ, ಬಸಗೌಡ ಪಾಟೀಲ, ಉಮೇಶ ಪಾಟೀಲ, ಸಿದ್ದು ಹವಳೆ, ಸತೀಶ ಯರಂಡೋಲಿ, ಅನಿಲಕುಮಾರ ಸತ್ತಿ, ವಿಶ್ವನಾಥ ನಾಮದಾರ, ಅರವಿಂದ ಕಾರ್ಚಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net