ಪತ್ರಿಕೆಗಳು ಓದು ಅಭಿರುಚಿ ಬೆಳೆಸಿಕೊಳ್ಳಿ

01 hunasagi 02
Published on

ಹುಣಸಗಿ: ಕನ್ನಡ ಪತ್ರಿಕೆಗಳಿಗೆ ಒದುಗರೇ ಜೀವಾಳವಾಗಿದ್ದು, ಹೀಗಾಗಿ ಪ್ರತಿಯೊಬ್ಬರು ಪತ್ರಿಕೆ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಭೀಮಶೇನರಾವ್ ಕುಲಕರ್ಣಿ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ, ಅಂತಾರಾಜ್ಯ ಮತ್ತು ಜಿಲ್ಲೆಯ ಸುದ್ದಿಗಳನ್ನು ಒಂದು ಪತ್ರಿಕೆ ಹೊರಬರುವಲ್ಲಿ ನೂರಾರು ಜನರ ಶ್ರಮ ಹಾಗೂ ಕಾರ್ಯಕ್ಷಮತೆ ಅಡಗಿರುತ್ತದೆ. ಇದನ್ನು ಓದುಗರು ಅರಿತುಕೊಳ್ಳಬೇಕು. ಅಲ್ಲದೆ ವಿದ್ಯಾರ್ಥಿಗಳು ಕೂಡ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಪತ್ರಿಕೆಗಳು ಇಂದಿಗೂ ತಮ್ಮ ಭಾಷೆ ಸೋಗಡಿನೊಂದಿಗೆ ನಿಖರ ಸುದ್ದಿಗಳನ್ನು ನೀಡುವಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಂಡಿವೆ. ಸುದ್ದಿಯ ಧಾವಂತದಲ್ಲಿ ವರದಿಗಾರರು ಕೂಡ ಎಲ್ಲ ಮಜಲುಗಳಲ್ಲಿ ಅರಿತುಕೊಂಡು ಸುದ್ದಿ ಮಾಡುಬೇಕಾದ ಅನಿವಾರ್ಯತೆ ಇದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಪಪಂ ಸದಸ್ಯ ಸಿದ್ರಾಮಪ್ಪ ಮುಗದಗಲ್ಲ, ಶಿಕ್ಷಕ ಗುರುರಾಜ ಜೋಶಿ ಮಾತನಾಡಿದರು.

ಮುಖ್ಯಗುರು ವಿಠ್ಠಲ ಚವ್ಹಾಣ್, ಪತ್ರಕರ್ತರಾದ ಬಾಲಪ್ಪ ಕುಪ್ಪಿ, ಮಲ್ಲಿಕಾರ್ಜುನ ಗುತ್ತೇದಾರ, ಸಿದ್ದನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಬಾಪುಗೌಡ ಮೇಟಿ, ಶಿಕ್ಷಕರಾದ ಬಸವರಾಜ ತೆಗ್ಗೆಳ್ಳಿ, ಮಶಾಕ ಯಾಳಗಿ, ಸೋಮನಗೌಡ ಬಳವಾಟ, ವಿಜಯಲಕ್ಷಿö್ಮÃ ಕುಂಬಾರ, ಭಾಗ್ಯಶ್ರೀ ಇತರರಿದ್ದರು.

ನಿವೃತ್ತ ಶಿಕ್ಷಕ ಬಸವರಾಜ ಕೋಳಕೂರ ಪ್ರಾರ್ಥಿಸಿದರು. ನಾಗನಗೌಡ ಪಾಟೀಲ್ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net